ಉಡುಪಿ: ಆಳ ಸಮುದ್ರಕ್ಕೆ ಹೋಗುವ ಮೀನುಗಾರಿಕಾ ಬೋಟ್‍ನಲ್ಲಿ ಯುವಕ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ.ಭಾಗ್ಯರಾಜ್ (26) ಮೃತ ಯುವಕ. ಶ್ರೀ ದುರ್ಗಾ ಎಂಬ ಮೀನುಗಾರಿಕಾ ಬೋಟ್ ಮಲ್ಪೆ ಬಂದರಲ್ಲಿ ಲಂಗರು ಹಾಕಿತ್ತು. ನಿಂತಿದ್ದ ಬೋಟ್‍ಗೆ ಕಟ್ಟಲಾಗಿದ್ದ ಹಗ್ಗಕ್ಕೆ ನೇಣು ಹಾಕಿಕೊಂಡು ಭಾಗ್ಯರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.ಆರ್ಥಿಕ ಸಂಕಷ್ಟದಿಂದ ಭಾಗ್ಯರಾಜ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ರಾಜ್ಯಮಟ್ಟದ ಕಬಡ್ಡಿ ಕ್ರೀಡಾಪಟುವಾಗಿರುವ ಭಾಗ್ಯರಾಜ್ ಮಲ್ಪೆ ವ್ಯಾಪ್ತಿಯಲ್ಲಿ ಚುರುಕಿನಿಂದ ಓಡಾಡಿಕೊಂಡಿದ್ದನು. ಪ್ರಾಣ ಕಳೆದುಕೊಳ್ಳುವಂತಹ ಸಮಸ್ಯೆ ಇರಲಿಲ್ಲ ಎಂದು ಗೆಳೆಯರು ಮಾತನಾಡುತ್ತಿದ್ದರು.ಭಾಗ್ಯರಾಜ್ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಗಳಲ್ಲಿ ಆಲ್ ರೌಂಡರ್ ಆಟಗಾರನಾಗಿದ್ದ. ಅಲ್ಲದೇ ಕೇರಳ, ತಮಿಳುನಾಡು ಟೀಂಗಳಿಗೆ ಭಾಗ್ಯರಾಜ್ ಆಡುತ್ತಿದ್ದ. ಆದರೆ ಸಾಲ ಮರುಪಾವತಿಸಲಾಗದೆ ಬಹಳ ಒತ್ತಡ ಮಾಡಿಕೊಂಡಿದ್ದನು. ಕಳೆದ ರಾತ್ರಿ ಕೆಟ್ಟು ನಿಂತಿದ್ದ ಮೀನುಗಾರಿಕಾ ಬೋಟ್‍ಗೆ ಹಗ್ಗ ಕಟ್ಟಿ ನೇಣು ಬಿಗಿದು ಮೀನು ತುಂಬಿಸಿಡುವ ಸ್ಟೋರೇಜ್‍ಗೆ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.Sign in to your account
Username or Email Address


Password

 Remember Me


