ಬೆಂಗಳೂರು: ತನ್ನ ಪತ್ನಿಯನ್ನು ಪಟಾಯಿಸಿಕೊಂಡು ಹೋದವನನ್ನು ಬರ್ಬರವಾಗಿ ಕೊಲೆ ಮಾಡಿ ಅವನ ರಕ್ತವನ್ನು ಕುಡಿದಿದ್ದ ಆರೋಪಿಯನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ತಬ್ರೇಜ್, ನಿಜಾಮ್ ಹಾಗೂ ಅಲಿ ಅಂಡು ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ತಬ್ರೇಜ್ ಪತ್ನಿಯೊಂದಿಗೆ ವಾಸವಿದ್ದ ಶುಭಾನ್ ಅನ್ನು ಈ ಮೂವರು ಅಪಹರಿಸಿಕೊಂಡು ಬಂದು ಅವನನ್ನು ಹೊಡೆದು ಕೊಂದಿದ್ದರು. ಈ ಸಂಬಂಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ತಬ್ರೇಜ್ ಪತ್ನಿ ಮದುವೆಯಾದ ಬಳಿಕ ಶುಭಾನ್ ಜೊತೆ ಓಡಿ ಹೋಗಿದ್ದಳು. ಶುಭಾನ್ ಮತ್ತು ತಬ್ರೇಜ್ ಪತ್ನಿ ತುಮಕೂರಿನಲ್ಲಿ ವಾಸವಾಗಿದ್ದರು. ಈ ವಿಚಾರ ಒಂದು ದಿನ ತಬ್ರೇಜ್‍ಗೆ ಗೊತ್ತಾಗಿದೆ. ಆತ ಕೂಡಲೇ ತನ್ನ ಇಬ್ಬರು ಸ್ನೇಹಿತರಾದ ನಿಜಾಮ್ ಹಾಗೂ ಅಲಿಯನ್ನು ಕರೆದುಕೊಂಡು ತುಮಕೂರಿಗೆ ಹೋಗಿ ಶುಭಾನ್ ಅನ್ನು ಕಿಡ್ಯಾಪ್ ಮಾಡಿದ್ದಾನೆ. ನಂತರ ಅವನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ರೈಲ್ವೇ ಟ್ರ್ಯಾಕ್ ಬಳಿ ಕೊಂದು ಹಾಕಿದ್ದಾರೆ. ಈ ವೇಳೆ ತಬ್ರೇಜ್, ಶುಭಾನ್ ರಕ್ತವನ್ನು ಕೂಡ ಕುಡಿದ್ದಿದ್ದಾನೆ.ಈ ಪ್ರಕರಣವನ್ನು ದಾಖಲಿಸಿಕೊಂಡ ಡಿಜೆ ಹಳ್ಳಿ ಪೊಲೀಸರು ಇಂದು ಹಂತಕರನ್ನು ಬಂಧಿಸಿದ್ದಾರೆ. ಹತ್ಯೆಯ ಪ್ರಮುಖ ಆರೋಪಿ ತಬ್ರೇಜ್, ಪಿಕ್ ಪ್ಯಾಕೇಟರ್ ಆಗಿದ್ದು ಆತನ ಮೇಲೆ ಈಗಾಗಲೇ ಹಲವಾರು ಪ್ರಕರಣಗಳು ಇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.Sign in to your account
Username or Email Address


Password

 Remember Me


