ಬೆಂಗಳೂರು: ಕೊರೊನಾ ವೈರಸ್ ನಡುವೆ ಯಾವುದೇ ಮಾಸ್ಕ್ ಇಲ್ಲದೆ, ಮಹಿಳಾ ಸಂಘದಲ್ಲಿನ ಎರಡು ಗುಂಪುಗಳ ನಡುವೆ ಜಡೆ ಜಗಳ ನಡೆದಿದ್ದು, ಮಹಿಳೆಯರು ಬೀದಿಯಲ್ಲಿ ಹೊಡೆದಾಡಿಕೊಂಡಿದ್ದಾರೆ.ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಘದ ಅಧ್ಯಕ್ಷೆಯಿಂದ ಸದಸ್ಯ ಮಹಿಳೆ ಮೇಲೆ ಹಲ್ಲೆ ನಡೆದಿದೆ. ಸಂಘದ ಸಭೆ ಮಾಡುವ ವಿಚಾರದಲ್ಲಿ ಇಬ್ಬರೂ ಜಗಳಾಡಿಕೊಂಡಿದ್ದು, ಬೀದಿ ರಂಪಾಟ ಮಾಡಿದ್ದಾರೆ. ಗಲಾಟೆಯಲ್ಲಿ ಬೈರಮ್ಮ ಗಾಯಗೊಂಡಿದ್ದು, ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ.ಮಹಿಳೆಯರು ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.Sign in to your account
Username or Email Address


Password

 Remember Me


