ಮಂಡ್ಯ: ಕಳೆದ ದಿನವಷ್ಟೆ ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಹುಚ್ಚನಂತೆ ಅಲೆದಾಡುತ್ತಿದ್ದ ವೆಂಕಟ್‍ನನ್ನು ಸ್ಥಳೀಯರು ಗುರುತಿಸಿದ್ದರು. ಇದೀಗ ಜ್ಯೂಸ್ ಕುಡಿದು ಹಣ ನೀಡದೆ ಹಲ್ಲೆಗೆ ಮುಂದಾಗಿದ್ದ ವೆಂಕಟ್‍ಗೆ ಸಾರ್ವಜನಿಕರು ಏಟು ಕೊಟ್ಟಿದ್ದಾರೆ.ಶ್ರೀರಂಗಪಟ್ಟಣದ ದರಸಗುಪ್ಪೆ ಬಳಿ ಈ ಘಟನೆ ನಡೆದಿದೆ. ಹುಚ್ಚ ವೆಂಕಟ್ ಕಬ್ಬಿನ ಜ್ಯೂಸ್ ಕುಡಿದು ಹಣ ನೀಡದೆ ರಂಪಾಟ ಮಾಡಿದ್ದ. ಅಷ್ಟೇ ಅಲ್ಲದೇ ಜ್ಯೂಸ್ ಅಂಗಡಿಯವನ ಮೇಲೆ ಕೈ ಮಾಡಿದ್ದಾನೆ. ಈ ವೇಳೆ ಹಲ್ಲೆಗೆ ಮುಂದಾಗಿದ್ದ ವೆಂಕಟ್‍ಗೆ ಸಾರ್ವಜನಿಕರು ಏಟು ಕೊಟ್ಟಿದ್ದಾರೆ. ವೆಂಕಟ್ ಕಳೆದ ಎರಡ್ಮೂರು ದಿನಗಳಿಂದ ಶ್ರೀರಂಗಪಟ್ಟಣದಲ್ಲೇ ಅಲೆದಾಡುತ್ತಿದ್ದಾನೆ.ಸೋಮವಾರ ಕೂಡ ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಹುಚ್ಚನಂತೆ ಅಲೆದಾಡುತ್ತಿದ್ದ ವೆಂಕಟ್ ನನ್ನು ಸ್ಥಳೀಯರು ಗುರುತಿಸಿದ್ದರು. ನಂತರ ವೆಂಕಟ್ ಬಳಿ ತೆರಳಿ ಬುದ್ಧಿವಾದ ಹೇಳಿದ್ದರು. ಇದರಿಂದ ಕೋಪಗೊಂಡ ಹುಚ್ಚ ವೆಂಕಟ್ ಸ್ಥಳೀಯರಿಗೆ ಬೈದು ಕಿರುಚಾಡಿದ್ದರಿಂದ ಸಾರ್ವಜನಿಕರು ಹೆದರಿಕೊಂಡು ಆತನಿಂದ ದೂರ ಹೋಗಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.Sign in to your account
Username or Email Address


Password

 Remember Me


