ಹಾಸನ: ರಾಹುಲ್ ಗಾಂಧಿಗೆ ನಿಮ್ಮಿಂದ ಇದು ಆಗಲ್ಲ. ಒಂದು ವೇಳೆ ಕಾಂಗ್ರೆಸ್‍ಗೆ ಮತ್ತೆ ಪುನರ್ಜನ್ಮ ಕೊಡುವ ಶಕ್ತಿ ಇದ್ದರೆ ಅದು ಪ್ರಿಯಾಂಕಾ ಗಾಂಧಿಗೆ ಅಂತ ನೇರವಾಗಿ ಹೇಳಿದ್ದೆ ಎಂದು ಮಾಜಿ ಸಚಿವ ವಿಶ್ವನಾಥ್ ಹೇಳಿದರು.ಮಾಜಿ ಸಚಿವ ವಿಶ್ವನಾಥ್ ಚನ್ನರಾಯಪಟ್ಟಣದಲ್ಲಿ ಹಾಸನದ ಉಸ್ತುವಾರಿ ಸಚಿವ ಗೋಪಾಲಯ್ಯ ಅವರನ್ನು ಭೇಟಿ ಮಾಡಿದ್ದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವನಾಥ್, ನಾನು ಇಲ್ಲೇ ಕೆ.ಆರ್ ನಗರದಲ್ಲಿ ಇದ್ದೆ. ಹೀಗಾಗಿ ಸಚಿವ ಗೋಪಾಲಯ್ಯ ಅವರನ್ನು ಭೇಟಿ ಮಾಡಲು ಬಂದಿದ್ದೇನೆ. ಅದರಲ್ಲಿ ಬೇರೆ ಉದ್ದೇಶವಿಲ್ಲ ಎಂದು ತಿಳಿಸಿದರು.ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾ, ಕಾಂಗ್ರೆಸ್‍ನಲ್ಲಿ ಇಂದು ಯಾವ ಲೀಡರ್‌ಗಳೂ ಇಲ್ಲ. 2020ರ ಕೊನೆಯ ಭಾಗದ ಹೊತ್ತಿಗೆ ರಾಜಕೀಯ ಧ್ರುವೀಕರಣ ಬಹಳ ದೊಡ್ಡಮಟ್ಟಕ್ಕೆ ಆಗುವ ಸೂಚನೆಗಳಿವೆ. ಈ ಹಿಂದೆಯೇ ರಾಹುಲ್ ಗಾಂಧಿಗೆ ನಿಮ್ಮಿಂದ ಇದು ಆಗಲ್ಲ. ಒಂದು ವೇಳೆ ಕಾಂಗ್ರೆಸ್‍ಗೆ ಮತ್ತೆ ಪುನರ್ಜನ್ಮ ಕೊಡುವ ಶಕ್ತಿ ಇದ್ದರೆ ಅದು ಪ್ರಿಯಾಂಕಾ ಗಾಂಧಿಗೆ ಅಂತ ನೇರವಾಗಿ ಹೇಳಿದ್ದೆ ಎಂದರು.ಇನ್ನೂ ದೇವೇಗೌಡರು ರಾಜ್ಯ ಸಭೆಗೆ ಸ್ಪರ್ಧಿಸುವ ಬಗ್ಗೆ ಮಾತನಾಡಿ, ಅವರು ರಾಜ್ಯಸಭೆಗೆ ಬರುವ ಮೂಲಕ ಅವರ ಅನುಭವವನ್ನು ನೀಡಬೇಕು. ಅವರ ಆಯ್ಕೆ ಆಗಬೇಕು ಎಂದು ತಿಳಿಸಿದರು.Sign in to your account
Username or Email Address


Password

 Remember Me


