ಬೆಂಗಳೂರು: ಸ್ಯಾಂಡಲ್‍ವುಡ್‍ನಿಂದ ಬಾಲಿವುಡ್‍ಗೆ ಕಾಲಿಟ್ಟಿರುವ ಕನ್ನಡದ ಬೆಡಗಿ ಪ್ರಣೀತಾ ಸುಭಾಷ್ ತೆಲುಗು, ತಮಿಳಿನಲ್ಲೂ ಸಿನಿಮಾಗಳನ್ನು ಮಾಡಿದ್ದು, ಈ ಮೂಲಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಪ್ರಣೀತಾ, ಇದೀಗ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಶೂಟಿಂಗ್‍ಗೆ ಸಿದ್ಧವಾಗುತ್ತಿದ್ದಾರಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.  A post shared by Pranitha Subhash ???? (@pranitha.insta) on Jun 7, 2020 at 12:46am PDTಪ್ರಣೀತಾ ಕೈಯ್ಯಲ್ಲಿ ಈಗಾಗಲೇ ಹಲವು ಸಿನಿಮಾಗಳಿದ್ದು, ಆ್ಯಕ್ಟಿಂಗ್‍ನಲ್ಲಿ ಫುಲ್ ಬ್ಯುಸಿಯಾಗಿದ್ದರು. ಇದೇ ಸಂದರ್ಭದಲ್ಲಿ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿ ಸಹ ತೊಡಗಿಕೊಂಡಿದ್ದು, ಲಾಕ್‍ಡೌನ್‍ನಿಂದಾಗಿ ಸಂಕಷ್ಟ ಎದುರಿಸುತ್ತಿದ್ದ ವಲಸೆ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಸಹಾಯ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  A Productive day today was! Auto rickshaws have started plying in the city and it’s very important to maintain good hygiene at a time like this . Transparent Sheets/shields to separate the customer and the auto drivers is a must . Thought we can provide this to 100+ drivers along with a bottle of chemical to sanitise handles and interiors of the auto between customers to prevent further spread of the virus . Made a time lapse version so it doesn’t take up ur time..A post shared by  Pranitha Subhash ???? (@pranitha.insta) on May 22, 2020 at 5:11am PDTಇದೀಗ ಲಾಕ್‍ಡೌನ್ ಸಡಿಲಗೊಳಿಸಲಾಗಿದೆ, ಮನರಂಜನೆ ಹೊರತುಪಡಿಸಿ ಉಳಿದೆಲ್ಲ ವಲಯಗಳು ಮತ್ತೆ ಕಾರ್ಯಾರಂಭಿಸಿವೆ. ಸಿನಿಮಾ ಚಿತ್ರೀಕರಣಕ್ಕೂ ಇನ್ನೇನು ಅನುಮತಿ ಸಿಗಬೇಕಿದೆ. ಹೀಗಾಗಿ ಪ್ರಣೀತಾ ಸಿದ್ಧತೆ ನಡೆಸುತ್ತಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಪ್ರಣೀತಾ ಸಲೂನ್‍ಗೆ ಹೋಗಿ ಮೇಕ್‍ಒವರ್ ಮಾಡಿಸಿಕೊಂಡಿದ್ದಾರೆ. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಲ್ಲಿ ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.  Met @rohinikatochsepat , @DCPSouthBCP & handed over sanitiser dispensers on behalf of @pranitha_foundation . The dispensers will be placed at different police stations across the city. #ProtectThoseWhoProtect Big salute to the police who have been risking their lives during this pandemic ????????A post shared by  Pranitha Subhash ???? (@pranitha.insta) on Jun 5, 2020 at 7:48am PDTಹೇರ್ ಕಟಿಂಗ್ ಸಹ ಮಾಡಿಸಿಕೊಂಡಿರುವ ಪ್ರಣೀತಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಶೂಟಿಂಗ್ ಪ್ರಾರಂಭವಾದರೆ ಹಾಜರಾಗಲು ತಯಾರಿದ್ದೇನೆ ಎಂಬ ಮುನ್ಸೂಚನೆ ನೀಡಿದ್ದಾರೆ. ಬಹುತೇಕ ಎಲ್ಲ ವಲಯಗಳು ತರೆದಿದ್ದು, ಧಾರಾವಾಹಿ ಚಿತ್ರೀಕರಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಆದರೆ ಸಿನಿಮಾ ಶೂಟಿಂಗ್‍ಗೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣಕ್ಕೂ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ.  Post Covid world salon experience was nothing less than embarking on a space mission!A post shared by  Pranitha Subhash ???? (@pranitha.insta) on Jun 6, 2020 at 4:24am PDTಪ್ರಣೀತಾ ಸದ್ಯ ಸ್ಯಾಂಡಲ್‍ವುಡ್‍ನ ರಾಮನ ಅವತಾರ ಹಾಗೂ ಬಾಲಿವುಡ್‍ನ ಭುಜ್: ದಿ ಪ್ರೈಡ್ ಆಫ್ ಇಂಡಿಯಾ, ಹಂಗಾಮಾ 2 ಚಿತ್ರಗಳಲ್ಲಿ ಬ್ಯಸಿಯಾಗಿದ್ದಾರೆ. ಹೀಗಾಗಿ ಮತ್ತೆ ಶೂಟಿಂಗ್‍ಗೆ ತೆರಳಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆ ಇದೀಗ ಮೂಡಿದೆ.Sign in to your account
Username or Email Address


Password

 Remember Me


