ಮಂಡ್ಯ: ಸದಾ ವಿವಾದ ಮತ್ತು ಗಲಾಟೆಗಳ ಮೂಲಕ ಸುದ್ದಿಯಾಗೋ ತನ್ನನ್ನ ತಾನೇ ಫೈರಿಂಗ್ ಸ್ಟಾರ್ ಅಂತ ಕರೆದುಕೊಳ್ಳುವ ಹುಚ್ಚ ವೆಂಕಟ್ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾನಸಿಕ ಅಸ್ವಸ್ಥನ ಹಾಗೆ ಓಡಾಡಿರುವ ವಿಡಿಯೋ ವೈರಲ್ ಆಗಿದೆ.ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಹುಚ್ಚನಂತೆ ಅಲೆದಾಡುತ್ತಿದ್ದ ವೆಂಕಟ್ ನನ್ನು ಸ್ಥಳೀಯರು ಗುರುತಿಸಿದ್ದಾರೆ. ವೆಂಕಟ್ ಬಳಿ ತೆರಳಿ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಹುಚ್ಚ ವೆಂಕಟ್ ಸ್ಥಳೀಯರಿಗೆ ಬೈದು ಕಿರುಚಾಡಿದ್ದರಿಂದ ಸಾರ್ವಜನಿರು ಹೆದರಿಕೊಂಡು ಆತನಿಂದ ದೂರ ಹೋಗಿದ್ದಾರೆ.ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಿಂದೆ ಚೆನ್ನೈನಲ್ಲಿ ಬರಿಗಾಲಿನಲ್ಲಿ ಓಡಾಡಿಕೊಂಡಿದ್ದ ಹುಚ್ಚ ವೆಂಕಟ್ ನನ್ನು ಅಲ್ಲಿಯ ಕನ್ನಡಿಗರು ಗುರುತಿಸಿ ಕರ್ನಾಟಕಕ್ಕೆ ಕಳುಹಿಸಿದ್ದರು. ತದನಂತರ ಮಂಡ್ಯದಲ್ಲಿ ಪಾರ್ಕ್ ಮಾಡಿದ್ದ ಕಾರಿನ ಗ್ಲಾಸ್ ಒಡೆದು ಸ್ಥಳೀಯರು ಹುಚ್ಚ ವೆಂಕಟ್ ನನ್ನು ಥಳಿಸಿದ್ದರು.Sign in to your account
Username or Email Address


Password

 Remember Me


