ಬೆಂಗಳೂರು: ಬ್ರೇಕ್ ಫೇಲ್‍ನಿಂದಾಗಿ ಬಸ್‍ ಒಂದು ಡಿಪೋದಿಂದ ಹೊರ ನುಗ್ಗಿದ ಘಟನೆ ಪೂರ್ಣಪ್ರಜ್ಞಾ ನಗರದಲ್ಲಿ ನಡೆದಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಪೂರ್ಣಪ್ರಜ್ಞಾ ನಗರದ ಡಿಪೋ 33ರಲ್ಲಿ ಇಂದು ಬೆಳಗ್ಗೆ 10:45 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಸಿಬ್ಬಂದಿ ನಿಲ್ಲಿಸಿದ್ದ 2 ಬೈಕ್, ಒಂದು ಸೈಕಲ್‍ಗೆ ಜಖಂಗೊಡಿವೆ. ಬಸ್ ಏನಾದ್ರು ಇನ್ನು ಸ್ವಲ್ಪ ಮುಂದೆ ಬಂದಿದ್ದರೆ ದೊಡ್ಡ ಹಳ್ಳಕ್ಕೆ ಬೀಳುತ್ತಿತ್ತು.ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಪೋ 33ರ ಮ್ಯಾನೇಜರ್, ಅಪಘಾತ ಸಂಭವಿಸಿದ ಬಸ್ ರೂಟ್‍ನಲ್ಲಿ ಸಂಚಾರ ಮಾಡುವುದಿಲ್ಲ. ಡಿಪೋದಲ್ಲಿ ಇದ್ದ ಬಸ್ ಅನ್ನು ಟೆಸ್ಟಿಂಗ್ ನಡೆಸುತ್ತಿದ್ದಾಗ ಈ ಘಟನೆಯಾಗಿದೆ. ಬಸ್ ಚಾಲಕನಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


 Advertisement 







 Advertisement 




Sign in to your account
Username or Email Address


Password

 Remember Me


