ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರ ಅಂತಿಮ ಕಾರ್ಯಗಳು ಶುರುವಾಗಿದ್ದು, ಅಣ್ಣನಿಗೆ ಅಂತಿಮ ವಿಧಿವಿಧಾನದ ಪೂಜೆ ಮಾಡುವಾಗ ಧ್ರುವ ಸರ್ಜಾ, ಚಿರಂಜೀವಿ ಅವರನ್ನು ತಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ.ನಟ ಚಿರಂಜೀವಿ ಸರ್ಜಾ ಅವರ ಅಂತಿಯ ದರ್ಶನಕ್ಕೆ ಸಾಕಷ್ಟು ಜನರು ಆಗಮಿಸುತ್ತಿದ್ದಾರೆ. ದರ್ಶನದ ನಡುವೆಯೇ ಅರ್ಚಕರು ಪೂಜಾ ವಿಧಿವಿಧಾನವನ್ನು ಆರಂಭಿಸಿದ್ದಾರೆ. ಈ ವೇಳೆ ಅಣ್ಣ ಚಿರಂಜೀವಿಗೆ ಪೂಜೆ ಸಲ್ಲಿಸುವಾಗ ಧ್ರುವ ಕಣ್ಣೀರು ಹಾಕಿದ್ದಾರೆ. ಅಲ್ಲದೇ ಅಣ್ಣನನ್ನು ತಬ್ಬಿಕೊಂಡು ಗಳಗಳನೇ ಅತ್ತಿದ್ದಾರೆ. ಇತ್ತ ಚಿರಂಜೀವಿ ಪತ್ನಿ ಮೇಘನಾ ರಾಜ್ ಕೂಡ ಪತಿಯ ಕೆನ್ನೆ ಸವರಿದ್ದಾರೆ.ಸಮಯಾಭಾವದಿಂದ ಸಾರ್ವಜನಿಕರ ದರ್ಶನದ ನಡುವೆಯೇ ಪೂಜಾ ವಿಧಿವಿಧಾನ ಪ್ರಾರಂಭವಾಗಿದೆ. ಚಿರು ಅಂತಿಮ ವಿಧಿ ವಿಧಾನದ ಪೂಜೆಗೆ ಕುಟುಂಬಸ್ಥರು, ಅಭಿಮಾನಿಗಳು ಸೇರಿದಂತೆ ಸ್ಯಾಂಡಲ್‍ವುಡ್‍ನ ಅನೇಕ ಗಣ್ಯರು ಭಾಗಿಯಾಗಿದ್ದಾರೆ.ಗೌಡರ ಸಂಪ್ರದಾಯದಂತೆ ಪೂಜಾ ಕಾರ್ಯ ನಡೆಯುತ್ತಿದ್ದು, ಗೌಡ ಸಂಪ್ರದಾಯದಂತೆ ಫಾರ್ಮ್ ಹೌಸ್‍ನಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿದೆ. ಮನೆಯ ಬಳಿ ಅಂತಿಮ ವಿಧಿವಿಧಾನ ಮುಗಿದ ನಂತರ ಚಿರಂಜೀವಿ ಪಾರ್ಥಿವ ಶರೀರವನ್ನು ಕನಕಪುರ ಬಳಿಯ ಫಾರ್ಮ್ ಹೌಸ್‍ಗೆ ರವಾನೆ ಮಾಡಲಾಗುತ್ತಿದೆ.Sign in to your account
Username or Email Address


Password

 Remember Me


