ಬೆಂಗಳೂರು: ಸ್ಯಾಂಡಲ್ ವುಡ್ ನಟ ಚಿರು ಅವರ ಪ್ರೀತಿಯ ಶ್ವಾನ ದ್ರೋಣ ಇದೀಗ ತನ್ನ ಯಜಮಾನನನ್ನು ಕಳೆದುಕೊಂಡು ದುಃಖದಲ್ಲಿದೆ.ಹೌದು. ದ್ರೋಣ, ಚಿರು ಅವರ ಮುದ್ದಿನ ಶ್ವಾನವಾಗಿದೆ. ಆದರೆ ಇದೀಗ ಚಿರು ಅವರು ಹೃದಯಾಘಾತಕ್ಕೆ ಒಳಗಾಗಿ ಚಿರನಿದ್ರೆಗೆ ಜಾರಿದ್ದು, ತನ್ನ ಯಜಮಾನನನ್ನ ನೋಡಲು ದ್ರೋಣ ಹಠ ಮಾಡುತ್ತಿದ್ದಾನೆ.ರೆಬೆಲ್ ಸ್ಟಾರ್ ಅಂಬರೀಶ್ ಕೊಟ್ಟಿರುವ ನಾಯಿಯೊಂದು ಚಿರು ಮನೆಯಲ್ಲಿದೆ. ಆ ಶ್ವಾನಂದರೆ ಅಂದ್ರೆ ಚಿರು ಸರ್ಜಾಗೆ ತುಂಬಾನೇ ಇಷ್ಟ. ಪ್ರಾಣಿಗಳನ್ನ ತುಂಬಾನೇ ಪ್ರೀತಿ ಮಾಡ್ತಾ ಇದ್ದ ಚಿರು, ಇತ್ತೀಚಿಗಷ್ಟೇ ದರ್ಶನ್‍ಗೆ ಚಿರು ಸರ್ಜಾ ಒಂದು ಮುದ್ದಾದ ನಾಯಿ ಮರಿಯನ್ನ ಗಿಫ್ಟ್ ಆಗಿ ಕೊಟ್ಟಿದ್ರು.ಭಾನುವಾರ ಮಧ್ಯಾಹ್ನದವರೆಗೆ ಚೆನ್ನಾಗಿದ್ದ ನಟ ಚಿರಂಜೀವಿ ಸರ್ಜಾ, ತಮ್ಮ ನಿವಾಸದ ರಸ್ತೆಯಲ್ಲಿರುವ ನಿವಾಸಿಗಳ ಜೊತೆ ಮಾತನಾಡಿದ್ದರು. ಇದಾದ ನಂತರ ಚಿರು ದೇಹ ದಿಢೀರ್ ಬೆವರಲು ಆರಂಭಿಸಿತ್ತು. ಈ ವೇಳೆ ಉಸಿರಾಡಲು ತೊಂದರೆ ಆಗುತ್ತಿದೆ ಎಂದು ಸರ್ಜಾ ತನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದರು. ನಂತರ ಅವರನ್ನು ಕುಟುಂಬದವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಚಿರು ಕೊನೆಯುಸಿರೆಳೆದಿದ್ದಾರೆ.ಇದೀಗ ಚಿರು ಕುಟುಂಬ, ಅಭಿಮಾನಿವರ್ಗ ಶೋಕ ಸಾಗರದಲ್ಲಿ ಮುಳುಗಿದೆ. ಇಂದು ಮಧ್ಯಾಹ್ನದವರೆಗೆ ಚಿರು ನಿವಾಸದಲ್ಲಿ ಅಂತಿಮ ದರ್ಶನ ನಡೆಯಲಿದ್ದು, ಸಂಜೆ ವೇಳೆಗೆ ಸಹೋದರ ಧೃವ ಸರ್ಜಾ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.Sign in to your account
Username or Email Address


Password

 Remember Me


