ಬೆಂಗಳೂರು: ನಟಿ ಮೇಘನಾ ರಾಜ್ ತಮ್ಮ ಪತಿ ಚಿರಂಜೀವಿ ಸರ್ಜಾ ಪಾರ್ಥೀವ ಶರೀರದ ಮುಂದೆ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ಮೇಘನಾ ರಾಜ್ ಪತಿಯ ಪಾರ್ಥೀವ ಶರೀರದ ಎದುರು ಕೆಲಹೊತ್ತು ಕುಳಿತಿದ್ದರು. ಆಗ ಪತಿಯನ್ನೇ ನೋಡುತ್ತಾ ಮೌನವಾಗಿ ಕುಳಿತಿದ್ದರು. ಮನೆಯವರು ಕಾಫಿ ಕೊಟ್ಟರು ಕುಡಿಯಲು ಸಾಧ್ಯವಿಲ್ಲ ಎಂದು ಅಳುತ್ತಲೇ ನಿರಾಕರಿಸಿದ್ದಾರೆ. ಆಗ ಪತಿ ಚಿರುವನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕೊನೆಗೆ ದುಃಖ ತಾಳಲಾರದೇ ಮೇಘನಾ ಮನೆಯೊಳಗೆ ಹೋಗಿದ್ದಾರೆ.ಚಿರಂಜೀವಿ ಮತ್ತು ಮೇಘನಾ ಪರಸ್ಪರ ಪ್ರೀತಿಸಿ ಮನೆಯವರನ್ನು ಒಪ್ಪಿಸಿ 2018ರಲ್ಲಿ ಮದುವೆಯಾಗಿದ್ದರು. ಈ ಜೋಡಿ ಸದಾ ಸ್ನೇಹಿತರಂತೆ ಇದ್ದರು. ಆದರೆ ಚಿರಂಜೀವಿಯ ಅಕಾಲಿಕ ಮರಣಕ್ಕೆ ಕುಟುಂಬ ಮಾತ್ರವಲ್ಲ ಇಡೀ ಚಿತ್ರರಂಗವೇ ಶಾಕ್ ಆಗಿದೆ.ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಸದ್ಯಕ್ಕೆ ಚಿರು ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸಿನಿಮಾ ಗಣ್ಯರು, ಸ್ನೇಹಿತರು ಬಂದು ಚಿರಂಜೀವಿ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.Sign in to your account
Username or Email Address


Password

 Remember Me


