ಬೆಂಗಳೂರು: ಚಿರಂಜೀವಿ ಸರ್ಜಾ ಅಕಾಲಿಕ ಮರಣಕ್ಕೆ ಇಡೀ ಸ್ಯಾಂಡಲ್‍ವುಡ್ ಕಂಬನಿ ಮಿಡಿಯುತ್ತಿದ್ದು, ನಟ ಅರ್ಜುನ್ ಸರ್ಜಾ ಸಹ ತಮ್ಮ ಅಳಿಯನ ನಿಧನದ ಹಿನ್ನೆಲೆ ಫೆಸ್ಬುಕ್ ಪ್ರೊಫೈಲ್‍ಗೆ ಕಪ್ಪು ಬಣ್ಣ ಹಾಕಿದ್ದಾರೆ. ಈ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.ಚಿರಂಜೀವಿ ಸರ್ಜಾ ಅವರ ನಿಧನದ ಹಿನ್ನೆಲೆ ಇಡೀ ಸ್ಯಾಂಡಲ್‍ವುಡ್ ಕಂಬನಿ ಮಿಡಿಯುತ್ತಿದೆ. ಅವರ ಕುಟುಂಬ ದುಃಖದ ಮಡುವಿನಲ್ಲಿದೆ. ಅರ್ಜುನ್ ಸರ್ಜಾ ಅವರು ತಮ್ಮ ಅಳಿಯಂದಿರನ್ನು ಮಕ್ಕಳ ರೀತಿ ಕಂಡಿದ್ದರು. ಇದೀಗ ಚಿರು ವಿಧಿವಶರಾಗಿರುವ ಹಿನ್ನೆಲೆ ತೀವ್ರ ಆಘಾತಕ್ಕೊಳಗಾಗಿದ್ದಾರೆ.ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ(39) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದು, ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಇಂದು ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದ ಸರ್ಜಾ ಅವರು ದಂಡಂ ದಶಗುಣಂ, ವರದ ನಾಯಕ, ಸಿಂಗ ಸೇರಿ 22ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಸಿದ್ದರು.Sign in to your account
Username or Email Address


Password

 Remember Me


