ಬೆಂಗಳೂರು: ಚಿರಂಜೀವಿ ಸಾವು ನಂಬೋದಕ್ಕೆ ಆಗುತ್ತಿಲ್ಲ. 25 ನಿಮಿಷದ ಹಿಂದೆ ನಮ್ಮನ್ನು ಬಿಟ್ಟು ಹೋದ್ರು ಅಂತಾ ಸರ್ಜಾ ಕುಟುಂಬದ ಆಪ್ತ ಅನಿರಿಚ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.ಶನಿವಾರ ರಾತ್ರಿ ತಲೆಸುತ್ತು ಬಂದಿತ್ತು. ಕೂಡಲೇ ತಮ್ಮ ದೃವ ಸರ್ಜಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಇಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು, ಇಂದು ಹೃದಯಾಘಾತವಾಗಿ ನಿಧನ ಹೊಂದಿದ್ದಾರೆ. 39 ವರ್ಷದ ಚಿರಂಜೀವಿ ಸರ್ಜಾ ಎರಡು ವರ್ಷಗಳ ಹಿಂದೆ ನಟಿ ಮೇಘನಾ ರಾಜ್ ಅವರನ್ನ ಮದ್ವೆಯಾಗಿದ್ದರು.ಇಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಮಧ್ಯಾಹ್ನ 3.30ಕ್ಕೆ ದಾಖಲಾಗಿದ್ದರು. ನಾಲ್ಕು ಗಂಟೆಗೆ ಹೃದತಯಾಘಾತದಿಂದ ವಿಧಿವಶರಾಗಿದ್ದಾರೆ. ವಾಯುಪುತ್ರ, ದಂಡಂದಶಗುಣಂ, ಚಿರು ಸೇರಿದಂತೆ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.Sign in to your account
Username or Email Address


Password

 Remember Me


