ಕಾರವಾರ: ಗಾಯದ ನೋವು ತಾಳಲಾರದೆ ಕೋತಿಯೊಂದು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ತೆರಳಿರುವ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.ದಾಂಡೇಲಿಯ ನರ್ಸಿಂಗ್ ಹೋಂಗೆ ಬಂದ ಕೋತಿಯು ಬೆನ್ನು ಉಜ್ಜಿಕೊಳ್ಳತೊಡಗಿತ್ತು. ಆದರೆ ಕೋತಿ ಕಂಡು ಹೆದರಿದ ಸಿಬ್ಬಂದಿ ಕೋಲು ಹಿಡಿದು ಓಡಿಸಲು ಪ್ರಯತ್ನಿಸಿದರು. ಇಷ್ಟಾದರೂ ಬೆನ್ನು ಉಜ್ಜಿಕೊಳ್ಳುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಗಾಯಗೊಂಡ ಕೋತಿಗೆ ಚಿಕಿತ್ಸೆ ನೀಡಲು ಮುಂದಾದರು.ಕೋತಿಯನ್ನು ಎತ್ತಿಕೊಂಡು ಕಟ್ಟೆಯ ಮೇಲೆ ಕೂರಿಸಿ ಔಷಧಿ ಹಚ್ಚಿದರು. ಈ ವೇಳೆಯೂ ಕೋತಿ ಯಾರಿಗೂ ಏನು ಮಾಡದೇ ಸುಮ್ಮನೆ ಕುಳಿತು ಚಿಕಿತ್ಸೆಗೆ ಸ್ಪಂದಿಸಿತ್ತು. ಇದು ನೆರೆದವರ ಅಚ್ಚರಿಗೂ ಕಾರಣವಾಗಿತ್ತು. ಚಿಕಿತ್ಸೆ ಬಳಿಕ ಕೋತಿ ಅಲ್ಲಿಂದ ತೆರಳಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.Sign in to your account
Username or Email Address


Password

 Remember Me


