ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದು, ಈ ಕುರಿತು ತಮ್ಮ ಅಭಿಮಾನಿಗಳಿಗೂ ಅಪ್‍ಡೇಟ್ ನೀಡುತ್ತಿದ್ದಾರೆ. ಇದೀಗ ಐರಾಗೆ 18 ತಿಂಗಳು ತುಂಬಿದ ಹಿನ್ನೆಲೆ  ಸರ್ಪ್ರೈಸ್ ನೀಡಿರುವ ಕುರಿತು ಪೋಸ್ಟ್ ಮಾಡಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುವ ರಾಧಿಕಾ ಪಂಡಿತ್, ಆಗಾಗ ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಈ ಹಿಂದೆ ಐರಾ ತನ್ನ ತಮ್ಮನನ್ನು ತೊಡೆ ಮೇಲೆ ಮಲಗಿಸಿಕೊಂಡು ಲಾಲಿ ಹಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದರು. ಅಭಿಮಾನಿಗಳು ಇದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು.  And just like that our baby girl turns 18months today!! ???? Hope our lil baby sitter made u smile!! P.S : I am sure she is imitating my Dad ???? #nimmaRP #radhikapanditA post shared by  Radhika Pandit (@iamradhikapandit) on Jun 1, 2020 at 9:59pm PDTಇದೀಗ ಐರಾ 18 ತಿಂಗಳು ತುಂಬಿದ ಹಿನ್ನೆಲೆ ಕೇಕ್ ತಯಾರಿಸಿ ಸಂಭ್ರಮಿಸಿದ್ದಾರೆ. ಅದೂ ಸಹ ತಾವೇ ಮನೆಯಲ್ಲಿ ಮಾಡಿದ್ದು, ಮಾವಿನ ಹಣ್ಣಿನಿಂದ ಮಾಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಐರಾಗೆ 18 ತಿಂಗಳು ತುಂಬಿದ ಹಿನ್ನೆಲೆ ಮ್ಯಾಂಗೋ ಚೀಸ್ ಕೇಕ್ ಮಾಡಿದೆ. ನಿಜವಾಗಿಯೂ ಬಹಳ ಸಮಯದ ನಂತರ ಬೇಕ್ ಮಾಡಿದೆ, ಚೆನ್ನಾಗಿದೆ ಎಂದು ಬರೆದುಕೊಂಡಿದ್ದಾರೆ.  Made this Mango Cheesecake when Ayra turned 18 months! Baked something after really long!! It felt good ???? #nimmaRP #radhikapanditA post shared by  Radhika Pandit (@iamradhikapandit) on Jun 5, 2020 at 9:25am PDTಲಾಕ್‍ಡೌನ್ ಹಿನ್ನೆಲೆ ರಾಕಿಂಗ್ ಸ್ಟಾರ್ ಸಹ ಮನೆಯಲ್ಲೇ ಇದ್ದು, ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಮಗನೊಂದಿಗೆ ಯಶ್ ಬರಿ ಮೈಯ್ಯಲ್ಲಿ ಇರುವ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡು ನನ್ನ ಫೇವರಿಟ್ ಹುಡುಗರು ಎಂದು ಬರೆದುಕೊಂಡಿದ್ದರು. ಫೋಟೋದಲ್ಲಿ ಯಶ್ ತಮ್ಮ ಮುದ್ದು ಮಗನನ್ನು ಎತ್ತಿಕೊಂಡಿದ್ದು, ಅವನ ಮುಖವನ್ನೇ ನೋಡುತ್ತಾ ಸಂತಸಪಟ್ಟಿದ್ದಾರೆ. ಇನ್ನೂ ಜೂನಿಯರ್ ಯಶ್ ಕೂಡ ನಗುತ್ತಾ ಕ್ಯೂಟಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾನೆ.  My Favourite Boys ❤ #nimmaRP #radhikapanditA post shared by  Radhika Pandit (@iamradhikapandit) on May 27, 2020 at 7:28am PDTರಾಕಿ ಭಾಯ್ ಸಹ ಐರಾಗೆ ಊಟ ಮಾಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದರು. ಹೀಗೆ ಯಶ್ ದಂಪತಿ ಮಕ್ಕಳ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಪರಿಚಯಿಸುತ್ತಿದ್ದಾರೆ.Sign in to your account
Username or Email Address


Password

 Remember Me


