ಬೆಂಗಳೂರು: ಲಾಕ್‍ಡೌನ್ ನಂತರ ಜೂನ್ 8 ರಿಂದ ಹೋಟೆಲ್ ಗಳು ಓಪನ್ ಆಗುತ್ತಿವೆ. ಈಗ ಬೆಂಗಳೂರಿನ ಒಂದು ಹೋಟೆಲ್ ಇಮ್ಯೂನಿಟಿ ಪವರ್ ಹೆಚ್ಚಿಸುವ ಫುಡ್ ಮೆನು ರೆಡಿ ಮಾಡಿದೆ. ಜೂನ್ 8 ರಿಂದ ಗ್ರಾಹರಿಗೆ ಇಮ್ಯೂನಿಟಿ ಪವರ್ ಹೆಚ್ಚಿಸುವ ವಿಧವಿಧದ ಫುಡ್ ತಯಾರಾಗುತ್ತಿದೆ. ಬೆಂಗಳೂರಿನ ನೃಪತುಂಗಾ ರಸ್ತೆಯಲ್ಲಿರುವ ಹೋಟೆಲ್ ನಿಸರ್ಗ ಗ್ರಾಂಡ್ ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸಿದ್ಧಗೊಳಿಸಿದ್ದು, ಅದಕ್ಕಾಗಿ ವಿಶೇಷ ಮೆನು ಸಹ ಸಿದ್ಧಪಡಿಸಿದೆ.ರೋಗಿ ನಿರೋಧಕ ಶಕ್ತಿ ಹೆಚ್ಚಿಸುವ ಮೆನು: ರಾಗಿ ಇಡ್ಲಿ, ರಾಗಿ ದೋಸೆ, ರಾಗಿ ಮಿಲ್ಕ್ ಶೇಕ್, ಪಾಲಕ್ ದೋಸೆ, ಮೆಂತೆ ಸೊಪ್ಪಿನ ದೋಸೆ, ಮಲೆನಾಡು ಕಷಾಯ, ಹೆಸರುಕಾಳು ದೋಸೆ, ಲೆಮೆನ್ ಟೀ ಮತ್ತು ಜಿಂಝರ್ ಟೀಹೋಟೆಲ್ ನತ್ತ ಗ್ರಾಹಕರನ್ನು ಸೆಳೆಯಲು ಸಿಬ್ಬಂದಿ ಆರೋಗ್ಯಕರವಾದ ಮೆನು ರೆಡಿ ಮಾಡಿದೆ. ಕೊರೊನಾ ಸಮಯದಲ್ಲಿ ಗ್ರಾಹಕರು ಫಾಸ್ಟ್ ಫುಡ್ ಮೊರೆ ಹೋಗದೇ ಆರೋಗ್ಯಕರವಾದ ಆಹಾರ ಸೇವಿಸಬೇಕೆಂಬುವುದು ನಮ್ಮ ಉದ್ದೇಶ ಎಂದು ಹೋಟೆಲ್ ಮಾಲೀಕ ಕೃಷ್ಣರಾಜು ಹೇಳುತ್ತಾರೆ.Sign in to your account
Username or Email Address


Password

 Remember Me


