ಕಲಬುರಗಿ: ಜಿಲ್ಲೆಯಲ್ಲಿ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯಿರುವ 14 ವರ್ಷದೊಳಗಿನ 24 ಮಂದಿ ಮಕ್ಕಳು ಸೇರಿದಂತೆ ಒಟ್ಟು 69 ಜನರಿಗೆ ಇಂದು ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.ಕೋವಿಡ್-19 ಸೋಂಕು ದೃಢವಾದ ನಂತರ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಂಚೋಳಿ ತಾಲೂಕಿನ-02, ಚಿತ್ತಾಪುರ ತಾಲೂಕಿನ 36, ಯಡ್ರಾಮಿ ತಾಲೂಕಿನ 01, ಕಾಳಗಿ ತಾಲೂಕಿನ 15, ಆಳಂದ ತಾಲೂಕಿನ 14 ಹಾಗೂ ಕಲಬುರಗಿ ತಾಲೂಕಿನ ಓರ್ವ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 621ಕ್ಕೆ ಏರಿದೆ.ಜಿಲ್ಲೆಯ 37 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಇಂದು ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕಲಬುರಗಿ ನಗರದ 02, ಚಿತ್ತಾಪುರ ತಾಲೂಕಿನ-04, ಕಾಳಗಿ ತಾಲೂಕಿನ 07, ಕಮಲಾಪುರ ತಾಲೂಕಿನ 04, ಜೇವರ್ಗಿ ತಾಲೂಕಿನ 11, ಯಡ್ರಾಮಿ ತಾಲೂಕಿನ 01, ಆಳಂದ ತಾಲೂಕಿನ 05 ಹಾಗೂ ಸೇಡಂ ತಾಲೂಕಿನ 03 ಜನ ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತ 621 ಜನರಲ್ಲಿ 166 ಜನ ಗುಣಮುಖರಾಗಿದ್ದಾರೆ. ಉಳಿದಂತೆ 448 ಸಕ್ರಿಯ ರೋಗಿಗಳಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.Sign in to your account
Username or Email Address


Password

 Remember Me


