ಉಡುಪಿ: ಅವನೇ ಶ್ರೀಮನ್ನಾರಾಯಣ ಖ್ಯಾತಿಯ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಮನೆಯಲ್ಲಿ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.ಉಡುಪಿಯ ಅಲೆವೂರಿನಲ್ಲಿರುವ ತಮ್ಮ ಮನೆಯಲ್ಲಿ ಕುಟುಂಬಸ್ಥರ ಜೊತೆ ರಕ್ಷಿತ್ ಶೆಟ್ಟಿ ಕೇಕ್ ಕಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ. 37ನೇ ವಸಂತಕ್ಕೆ ಕಾಲಿಟ್ಟಿರುವ ರಕ್ಷಿತ್ ಕೊರೊನಾ ಸಂದರ್ಭ ಅದ್ಧೂರಿ ಹುಟ್ಟುಹಬ್ಬ ಆಚರಿಸದೆ ಇರಲು ನಿರ್ಧರಿಸಿದ್ದರು. ಅಂತಯೇ ಮನೆಯಲ್ಲಿ ಸಿಂಪಲ್ ಆಗಿ ಆಚರಿಸಿಕೊಂಡಿದ್ದಾರೆ.ತಂದೆ, ತಾಯಿ, ಅಣ್ಣ, ಅತ್ತಿಗೆ ಮತ್ತು ಅಣ್ಣನ ಮಕ್ಕಳ ಜೊತೆ ಹುಟ್ಟು ಹಬ್ಬದ ಖುಷಿಯನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಉಡುಪಿಯ ಗೆಳೆಯರನ್ನು ಕೂಡ ರಕ್ಷಿತ್ ಶೆಟ್ಟಿ ಭೇಟಿಯಾಗಿಲ್ಲ. ಕಳೆದ ರಾತ್ರಿ ಮನೆಯವರ ಜೊತೆ ಮಾತ್ರ ಕೇಕ್ ಕಟ್ಟಿಂಗ್ ಮಾಡಿದ್ದ ರಕ್ಷಿತ್ ಶೆಟ್ಟಿ, ಮನೆಗೆ ಬಂದ ಆಪ್ತ ಬಂಧುಗಳ ಸಮ್ಮುಖದಲ್ಲಿ ಮತ್ತೆ ಕೇಕ್ ಕಟ್ ಮಾಡಿ ಫೋಟೋಗೆ ಪೋಸ್ ನೀಡಿದ್ದಾರೆ.ರಕ್ಷಿತ್ ಸಹೋದರ ರಂಜಿತ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಹುಟ್ಟು ಹಬ್ಬದಂದು ರಕ್ಷಿತ್ ಮನೆಗೆ ಬಂದದ್ದು ಬಹಳ ಖುಷಿಯಾಗಿದೆ. ಕೊರೊನಾ ಇರುವುದರಿಂದ ಬೆಂಗಳೂರಲ್ಲಿ ಜನರ ಜೊತೆ ಬೆರೆಯಲು ಸಾಧ್ಯವಿಲ್ಲ ಅಂತ ಊರಿಗೆ ಬರಲು ಹೇಳಿದ್ದೆವು. ಕುಟುಂಬದ ಜೊತೆ ಕಾಲ ಕಳೆಯಲು ಒಂದು ಅವಕಾಶವೂ ಸಿಕ್ಕಿದೆ. ಮುಂದೆ ‘777 ಚಾರ್ಲಿ’ ಫಿಲಂ ರಿಲೀಸ್ ಆಗಲಿಕ್ಕಿದೆ ಎಂದು ಹೇಳಿದರು.\
Sign in to your account
Username or Email Address


Password

 Remember Me


