ಶಿವಮೊಗ್ಗ: ಸೋಮವಾರದಿಂದ ರಾಜ್ಯದ ಬಹುತೇಕ ದೇವಾಲಯಗಳು ಓಪನ್ ಆಗಲಿವೆ. ಈಗಾಗಲೇ ದೇವಸ್ಥಾನಗಳು ಕೂಡ ಸಲಕ ಸಿದ್ಧತೆ ಮಾಡಿಕೊಳ್ಳುತ್ತಿವೆ. ಆದರೆ ಸದ್ಯಕ್ಕೆ ಭಕ್ತರಿಗೆ ಸಿಗಂದೂರು ಚೌಡೇಶ್ವರಿ ತಾಯಿ ದರ್ಶನ ಸಿಗುವುದಿಲ್ಲ.ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಜೂನ್ 15 ನಂತರ ತೆರೆಯಲು ಹಾಗೂ ಭಕ್ತರ ದರ್ಶನಕ್ಕೆ ಅವಕಾಶ ನೀಡಲು ದೇವಸ್ಥಾನದ ಟ್ರಸ್ಟ್ ನಿರ್ಧಾರ ಮಾಡಿದೆ. ಚೌಡೇಶ್ವರಿ ತಾಯಿ ದೇವಾಲಯಕ್ಕೆ ಹೆಚ್ಚಾಗಿ ಕರಾವಳಿ ಹಾಗೂ ಬೆಂಗಳೂರು ಭಾಗದ ಜನರು ಬರುತ್ತಾರೆ. ಆದರೆ ಈಗ ಕರಾವಳಿ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಿರುವ ಕಾರಣ ದೇವಸ್ಥಾನ ತೆರೆಯಲು ಆಡಳಿತ ಮಂಡಳಿ ಹಿಂದೇಟು ಹಾಕಿದೆ ಎಂದು ತಿಳಿದು ಬಂದಿದೆ.ಮುಜರಾಯಿ ದೇವಾಲಯಗಳ ರೂಪುರೇಷೆ ನೋಡಿಕೊಂಡು ದೇವಾಲಯ ತೆರೆಯಲು ದೇವಸ್ಥಾನದ ಟ್ರಸ್ಟ್ ನಿರ್ಧಾರ ಮಾಡಿದೆ. ಸದ್ಯಕ್ಕೆ ಪ್ರತಿದಿನ ಚೌಡೇಶ್ವರಿ ತಾಯಿಗೆ ಅರ್ಚಕರಿಂದ ಪೂಜೆ, ಪ್ರಸಾದ ನಡೆಯುತ್ತಿದೆ.ಕೊರೊನಾ ಲಾಕ್‍ಡೌನ್ 5.0ನಲ್ಲಿ ಕೇಂದ್ರ ಸರ್ಕಾರವು ದೇವಾಲಯ ತೆರೆಯಲು ಅನುಮತಿ ನೀಡಿತ್ತು. ಹೀಗಾಗಿ ಜೂನ್ 8ರಿಂದ ದೇವಾಲಯ ತೆರೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಎಂಟು ಸೂತ್ರಗಳನ್ನು ಹೊರಡಿಸಿದೆ.ಎಂಟು ನಿಯಮಗಳು ಏನು?
1. ನಿತ್ಯ ಸ್ವಚ್ಛತೆ ಜೊತೆಗೆ ಒಳಗೆ-ಹೊರಗೆ ಡಿಸ್ ಇನ್ಫೆಕ್ಟರ್ ಸಿಂಪಡಣೆ ಕಡ್ಡಾಯ.
2. ಭದ್ರತಾ ಸಿಬ್ಬಂದಿಯನ್ನು ಎರಡು ಪಾಳಿಯಲ್ಲಿ ದೇವಾಲಯದ ಖರ್ಚಿನಲ್ಲೇ ನೇಮಿಸಿ.
3. ದೇವಾಲಯದ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ಕಡ್ಡಾಯ, ಒಳಾಂಗಣದಲ್ಲಿ ಅರ್ಚಕರಿಗೆ ಮಾಸ್ಕ್ ವಿನಾಯಿತಿ.
4. ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ, ಸ್ಯಾನಿಟೈಸರ್ ಹಾಕಿದ ನಂತರವೇ ದೇವಸ್ಥಾನಕ್ಕೆ ಎಂಟ್ರಿ.
5. ಥರ್ಮಲ್ ಸ್ಕ್ರೀನಿಂಗ್‍ನಲ್ಲಿ ಜ್ವರ ಪತ್ತೆಯಾದರೆ ದೇವಸ್ಥಾನಕ್ಕೆ ನೋ ಎಂಟ್ರಿ.
6. ಮಾಸ್ಕ್ ಧರಿಸದ ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶವಿಲ್ಲ.
7. ಸಾಮಾಜಿಕ ಅಂತರ ಕಾಪಾಡಲು ಬಾಕ್ಸ್, ಲೈನ್ ರೂಪಿಸುವುದು ಕಡ್ಡಾಯ.
8. ದೇವಸ್ಥಾನದ ಶೌಚಾಲಯ ಆಗಾಗ ಸ್ವಚ್ಛಗೊಳಿಸಿ, ಅಗತ್ಯ ಡಿಸ್ ಇನ್ಫೆಂಕಟರ್ ಸಿಂಪಡಿಸಬೇಕು.Sign in to your account
Username or Email Address


Password

 Remember Me


