ಬೆಂಗಳೂರು: ಸ್ಯಾಂಡಲ್‍ವುಡ್‍ನ ಜಾಲೆಂಜಿಂಗ್ ಸ್ಟಾರ್ ದರ್ಶನ್ ಇಂಡಸ್ಟ್ರಿಯಲ್ಲಿ ಓಡುವ ಕುದುರೆ ಅಂತಾನೇ ಕರೆಸಿಕೊಳ್ಳುವ ನಟ. ಸದ್ಯ ದರ್ಶನ್ ಸಿನಿಮಾ ಕೆಲಸಗಳಿಲ್ಲದೆ ಏನ್ ಮಾಡುತ್ತಿದ್ದಾರೆ ಎನ್ನುವ ಲಕ್ಷಾಂತ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿರುವ ತಮ್ಮ ತೂಗುದೀಪ ಫಾರ್ಮ್ ಹೌಸ್‍ನಲ್ಲಿ ಕುದುರೆ, ಗೋವು ಸೇರಿದಂತೆ ಪ್ರಾಣಿ, ಪಕ್ಷಿಗಳನ್ನು ಸಾಕಿದ್ದಾರೆ. ದಚ್ಚು ಆಗಾಗ ಫಾರ್ಮ್‍ಗೆ ಹೋಗಿ ಅವುಗಳೊಂದಿಗೆ ಕಾಲ ಕಳೆಯುತ್ತಾರೆ. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಹೆಚ್ಚಿನ ಸಮಯವನ್ನು ದಚ್ಚು ಅಲ್ಲಿಯೇ ಕಳೆಯುತ್ತಿದ್ದಾರೆ.ಕೊರೊನಾ ಲಾಕ್‍ಡೌನ್ ಹಿನ್ನೆಲೆ ಸಿನಿಮಾ ಚಿತ್ರೀಕರ ನಿಂತಿದೆ. ಕಳೆದ ಮೂರು ತಿಂಗಳಿಂದ ದರ್ಶನ್ ಆರ್.ಆರ್. ನಗರದ ಮನೆಯಲ್ಲಿಯೇ ಉಳಿದಿದ್ದರು. ಸದ್ಯ ಲಾಕ್‍ಡೌನ್ ಸಡಿಲಿಕೆ ಸಿಕ್ಕಿದ್ದರಿಂದ ಪ್ರಯಾಣಕ್ಕೆ ಅನುಕೂಲವಾಗಿದೆ. ಹೀಗಾಗಿ ಅವರು ಬೆಂಗಳೂರಿನಿಂದ ತಮ್ಮ ತೂಗುದೀಪ ಫಾರ್ಮ್ ಹೌಸ್‍ಗೆ ಭೇಟಿ ನೀಡಿ, ಪ್ರಾಣಿಗಳ ಕಾಲ ಕಳೆಯುತ್ತಿದ್ದಾರೆ.ಪ್ರಾಣಕ್ಕಿಂತ ಪ್ರಾಣಿಗಳನ್ನು ಹೆಚ್ಚಾಗಿ ಪ್ರೀತಿಸುವ ದಾಸ ಮೈಸೂರಿನಲ್ಲಿರು ತೂಗು ದೀಪ್ ಫಾಂ ಹೌಸ್‍ನಲ್ಲಿ ಫ್ರೆಂಡ್ಸ್ ಹಾಗೂ ಫ್ಯಾಮಿಯರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಕುದುರೆಗೆ ಮಾಲಿಶ್ ಮಾಡುತ್ತಾ, ನೆಚ್ಚಿನ ಪ್ರಾಣಿಗಳ ಜೊತೆಗೆ ಅದ್ಭುತವಾದ ಸಮಯವನ್ನು ಕಳೆಯುತ್ತಿದ್ದಾರೆ. ದರ್ಶನ್ ಜೊತೆಗೆ ಅಕ್ಕನ ಮಗ ಸಹ ಮಾವನಿಗೆ ಸಾಥ್ ಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಡಿಬಾಸ್ ಸಿಂಪ್ಲಿಸಿಟಿ ತುಂಬಿರುವ ವಿಡಿಯೋ ಸದ್ಯ ವೈರಲ್ ಆಗಿದೆ.https://www.facebook.com/Dcompany171/videos/2548816882037590Sign in to your account
Username or Email Address


Password

 Remember Me


