ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿಯ ನಿರೀಕ್ಷೆಯಲ್ಲಿದ್ದ ಬಸವ ಇಂದು ವಿಧಿವಶವಾಗಿದೆ.ಮೈಸೂರು ಸಮೀಪದ ಕೆ.ಆರ್.ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಬಸವನ ಅನಾರೋಗ್ಯದಿಂದ ನರಳುತ್ತಿತ್ತು. ಬಸವ ಬೇಗ ಚೇತರಿಸಿಕೊಳ್ಳಲಿ ಎಂದು ಗ್ರಾಮಸ್ಥರು ನಿತ್ಯ ಪೂಜೆ, ಪುನಸ್ಕಾರಗಳಲ್ಲಿ ತೊಡಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದೆ.ಕಾಳಮ್ಮನಕೊಪ್ಪಲು ಗ್ರಾಮಸ್ಥರಿಗೆ ಊರ ದೈವವೇ ಆಗಿದ್ದ ಬಸವ ಅನಾರೋಗ್ಯಕ್ಕೆ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಬಸವನನ್ನು ಭೇಟಿ ಮಾಡಿದ್ದರು. ಗ್ರಾಮಸ್ಥರೆಲ್ಲರೂ ದರ್ಶನ್ ಅವರು ಪುನಃ ಬಂದು ಭೇಟಿ ಮಾಡಿದರೆ ಬಸವ ಉಳಿಯುತ್ತಾನೆ ಎಂದು ದಚ್ಚು ಭೇಟಿಗೂ ಮನವಿ ಮಾಡಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ದರ್ಶನ್ ಅವರಿಗೆ ಬಸವನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ದರ್ಶನ್ ಅವರ ಪರವಾಗಿ ಅವರ ಸ್ನೇಹಿತರು ಬಸವನಿಗೆ ಔಷಧಿಗಳನ್ನು ತರಿಸಿ ಕೊಟ್ಟಿದ್ದರು.ದಚ್ಚು ಸ್ಪರ್ಶದ ಬಳಿಕ ದಾರಿ ಬಿಟ್ಟಿದ್ದ ಬಸವ:
2019 ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ಪರ ದರ್ಶನ್ ಪ್ರಚಾರ ನಡೆಸಿದ್ದರು. ಈ ವೇಳೆ ದಚ್ಚು ಕೆ.ಆರ್.ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮಕ್ಕೆ ಹೋಗಿದ್ದರು. ಅಭಿಮಾನಿಗಳು ಸೇರಿದಂತೆ ಅಪಾರ ಜನಸ್ತೋಮ ಗ್ರಾಮದಲ್ಲಿ ನೆರೆದಿತ್ತು. ಆದರೆ ಪ್ರಚಾರದ ಮಾರ್ಗದಲ್ಲಿ ಬಂದ ಬಸವ ಗುಟುರು ಹಾಕಿ ಅಡ್ಡಿಯಾಗಿ ನಿಂತಿತ್ತು. ಬಸವನನ್ನು ಕಂಡ ಜನ ಬೆದರಿ ನಿಂತಿದ್ದರು.ಪ್ರಚಾರ ವಾಹನದಿಂದ ಕೆಳಗೆ ಇಳಿದು ಬಂದ ದರ್ಶನ್, ಪರಿಚಯವಿರದ ಬಸವ ಕಡೆಗೆ ಧಾವಿಸಿ, ಅದರ ಮೈದಡವಿ ಸಮಾಧಾನ ಮಾಡಿದ್ದರು. ದರ್ಶನ್ ನಡವಳಿಕೆಗೆ ಸ್ಪಂದಿಸಿದ ಬಸವ ಶಾಂತವಾಗಿತ್ತು. ಈ ಪ್ರಸಂಗ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿತ್ತು. ಅಂದಿನಿಂದ ದರ್ಶನ್ ಜೊತೆಗೆ ಬಾಂಧವ್ಯ ಬೆಸೆದುಕೊಂಡಿದ್ದ ಬಸವನ ಕಾಲಿಗೆ ಇತ್ತೀಚೆಗೆ ಪೆಟ್ಟು ಬಿದ್ದಿತ್ತು. ಗಾಯಗೊಂಡಿದ್ದ ಬಸವ ಮಲಗಿದ ಜಾಗ ಬಿಟ್ಟು ಏಳಲೇ ಇಲ್ಲ. ಚಿಕಿತ್ಸೆ ಫಲಕಾರಿಯಾಗದೆ ಬಸವ ಸಾವನ್ನಪ್ಪಿದೆ.Sign in to your account
Username or Email Address


Password

 Remember Me


