ಚಾಮರಾಜನಗರ: ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟರ್ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರದಲ್ಲಿ ನಡೆದಿದೆ.ವೆಂಕಟಯ್ಯನ ಛತ್ರದ ನಿವಾಸಿ ಬಸವರಾಜು (35) ಮೃತಪಟ್ಟ ದುರ್ದೈವಿ. ಬಸವರಾಜು ಇಂದು ಅದೇ ಗ್ರಾಮದ ಮಹಿಳೆಯೊಬ್ಬರ ಮನೆ ಮುಂದೆ ಶವ ಪತ್ತೆಯಾಗಿದ್ದು, ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.ವಿವಾಹಿತ ಬಸವರಾಜು ಅದೇ ಗ್ರಾಮದ ಮಹಿಳೆಯೊಬ್ಬರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು. ಹೀಗಾಗಿ ಪತ್ನಿಯ ಜೊತೆಗೆ ಆಗಾಗ ಜಗಳವಾಗುತ್ತಿತ್ತು. ಬುಧವಾರ ರಾತ್ರಿ ಫೋನ್ ಕರೆ ಬಂತೆಂದು ತೆರಳಿದ ಬಸವರಾಜು ಇಂದು ಬೆಳಗ್ಗೆ ಮಹಿಳೆ ಮನೆಯ ಮುಂದೆ ಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.Sign in to your account
Username or Email Address


Password

 Remember Me


