ಹಾಸನ: ಹಾಸನದಲ್ಲಿ ಓರ್ವ ಎಸ್‍ಐ ಸೇರಿದಂತೆ ನಾಲ್ವರು ಪೊಲೀಸರು ಇಂದು ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದು, ಭವ್ಯ ಸ್ವಾಗತ ನೀಡಲಾಗಿದೆ.ಹಾಸನದ ಹಿಮ್ಸ್ ಆಸ್ಪತ್ರೆಯ ಮುಂಭಾಗ ಕೊರೊನಾ ಗೆದ್ದು ಬಂದ ಪೊಲೀಸರಿಗೆ ಹಾರ ಹಾಕಿ, ಹೂ ಬೊಕ್ಕೆ ಕೊಟ್ಟು, ಪುಷ್ಪವೃಷ್ಟಿ ಮಾಡಿ ಸ್ವಾಗತ ಕೋರಲಾಯ್ತು. ಪೊಲೀಸ್ ಬ್ಯಾಂಡ್ ಮೂಲಕ ಕೊರೊನಾ ಗೆದ್ದು ಬಂದ ಪೊಲೀಸರಿಗೆ ಗೌರವ ಸಲ್ಲಿಸಲಾಯ್ತು. ನಮ್ಮ ಪೊಲೀಸರು ಗುಣಮುಖರಾಗಿರುವುದು ಹೆಚ್ಚಾಗಿ ಕರ್ತವ್ಯ ನಿರ್ವಹಿಸಲು ಶಕ್ತಿ ಹೆಚ್ಚಿಸಿದೆ ಎಂದು ಪೊಲೀಸ್ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು.ದಕ್ಷಿಣ ವಲಯ ಐಜಿ ವಿಪುಲ್ ಕುಮಾರ್ ಮಾತನಾಡಿ ಪೊಲೀಸರು ಗುಣಮುಖರಾಗಿರುವುದು ಸಂತಸ ತಂದಿದೆ. ಪೊಲೀಸರ ಕೆಲಸ ಮತ್ತು ಶ್ರಮದ ಬಗ್ಗೆ ಹೆಮ್ಮೆಯಿದೆ. ನಮ್ಮ ಆಸ್ಪತ್ರೆ ಸಿಬ್ಬಂದಿಗೆ ಋಣಿಯಾಗಿದ್ದೇವೆ ಎಂದರು. ಇದೇ ವೇಳೆ ಮಾತನಾಡಿದ ಕೊರೊನಾ ಗೆದ್ದು ಬಂದ ಎಸ್‍ಐ ಕುಮಾರ್ ಮೊದಲು ಕೊರೊನಾ ಪಾಸಿಟಿವ್ ಬಂದಾಗ ಭಯ ಆಯ್ತು. ಒಂದೆರೆಡು ದಿನದಲ್ಲಿ ಹಂತ ಹಂತವಾಗಿ ಭಯ ಹೋಯ್ತು. ತಾವು ಗುಣಮುಖರಾಗಲು ಸಹಾಯ ಮಾಡಿ, ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.Sign in to your account
Username or Email Address


Password

 Remember Me


