ಗದಗ: ಚರಂಡಿ ಪಕ್ಕದಲ್ಲೇ ನವಜಾತ ಗಂಡು ಶಿಶುವನ್ನು ಬಿಸಾಕಿರೋ ಅಮಾನವೀಯ ಘಟನೆ ನಗರದ ಕೆ.ಸಿ.ರಾಣಿ ರಸ್ತೆಯ ಬಳಿ ಕಂಡುಬಂದಿದೆ.ದುಂಡಪ್ಪ ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಬಳಿ ಚರಂಡಿ ಬಳಿ ದೃಶ್ಯ ಕಂಡುಬಂದಿದೆ. ತಡರಾತ್ರಿ ಹೆರಿಗೆಯಾಗಿದ್ದು, ಬೆಳಗ್ಗಿನ ಜಾವ ರಟ್ಟಿನ ಬಾಕ್ಸ್ ನಲ್ಲಿ ತಂದು ಹಾಕಿ ಹೊಗಿದ್ದಾರೆ.ಪಾಪಿ ತಾಯಿಯ ಕಾಮಕ್ಕೆ ಅಥವಾ ಅಕ್ರಮ ಸಂಬಂಧಕ್ಕೆ ಏನೂ ಅರಿಯದ ಕಂದಮ್ಮ ಬಲಿ ಆಯಿತಾ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಕೆ.ಸಿ ರಾಣಿ ರಸ್ತೆಯಲ್ಲಿ ಸರ್ಕಾರಿ ಹೆರಿಗೆ ಆಸ್ಪತ್ರೆ ಹಾಗೂ ಅನೇಕ ಖಾಸಗಿ ಆಸ್ಪತ್ರೆಗಳಿವೆ. ಆದ್ದರಿಂದ ಯಾವ ಆಸ್ಪತ್ರೆಯಿಂದ ತಂದಿರಬಹುದು ಎಂಬುದರ ಬಗ್ಗೆ ಪೊಲೀಸರ ತನಿಖೆಗೆ ಮುಂದಾಗಿದ್ದಾರೆ.ಕೆಲವರು ಮಕ್ಕಳಿಗಾಗಿ ಹತ್ತು ದೇವರಿಗೆ ಹರಕೆ ಹೊತ್ತರೂ ಮಕ್ಕಳ ಭಾಗ್ಯ ಸಿಗುತ್ತಿಲ್ಲ. ಆದರೆ ಮುದ್ದಾದ ಗಂಡು ಮಗು ಬಿಸಾಕಿ ಹೊಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.ಸ್ಥಳಕ್ಕೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗದಗ್ ನ ಬೆಟಗೇರಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


