ಬೆಳಗಾವಿ/ಚಿಕ್ಕೋಡಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಊಟೋಪಚಾರ ಮಾಡಿದ್ದ ಚಿಕ್ಕೋಡಿಯ ಜಗಣಭೀ ಪಟೇಲ್ ಅಜ್ಜಿ ಇಂದು ನಿಧನರಾಗಿದ್ದಾರೆ.ಮಹಾರಾಷ್ಟ್ರದ ಔರವಾಡ ಗ್ರಾಮದ ದೇವಸ್ಥಾನದ ಜಮೀನು ವಾದವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಕೈಗೆತ್ತಿಕೊಂಡಿದ್ದರು. ಈ ಹಿನ್ನೆಲೆ ಚಿಕ್ಕೋಡಿಯ ಕರೋಶಿ ಗ್ರಾಮದಲ್ಲಿ ಅಂಬೇಡ್ಕರ್ ಅವರು 9 ದಿನ ತಂಗಿದ್ದರು. ಈ ವೇಳೆ ಅವರಿಗೆ ಜಗಣಭೀ ಅವರೇ ಊಟೋಪಚಾರದ ವ್ಯವಸ್ಥೆಯನ್ನು ಮಾಡಿದ್ದರು. ಅಂದು ಅಂಬೇಡ್ಕರ್ ಮುನ್ನಿ ಎಂದು ಜಗಣಭಿಯವರನ್ನು ಕರೆಯುತ್ತಿದ್ದರು.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಗಣಭೀ ಅಜ್ಜಿ ಇಂದು ಸ್ವ ಗ್ರಾಮ ಕರೋಶಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜಗಣಭೀ ಅವರಿಗೆ 108 ವಯಸ್ಸಾಗಿತ್ತು.Sign in to your account
Username or Email Address


Password

 Remember Me


