ಹಾವೇರಿ: ಜಿಲ್ಲೆಯಲ್ಲಿ ಇಂದು ಮತ್ತೊಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 24 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ.ಯುವತಿ ಮುಂಬೈನ ಅಂಧೇರಿಯಲ್ಲಿರೋ ಖಾಸಗಿ ಸಂಸ್ಥೆಯ ಉದ್ಯೋಗಿ. ಮೇ 19,ರಂದು ಓಲಾ ಕಾರಿನಲ್ಲಿ ತಂದೆ ಮತ್ತು ತಾಯಿಯೊಂದಿಗೆ ಶಿಗ್ಗಾಂವಿ ಪಟ್ಟಣಕ್ಕೆ ಆಗಮಿಸಿದ್ದಳು. ನಿನ್ನೆ ಯುವತಿಯ ತಂದೆಯಲ್ಲಿ ಸೋಂಕು ದೃಢಪಟ್ಟಿತ್ತು. ಇಂದು ಮಗಳಲ್ಲಿ ಸೋಂಕು ದೃಢಪಟ್ಟಿದೆ. ಮೂಲತಃ ಶಿಗ್ಗಾಂವಿ ಪಟ್ಟಣದ ನಿವಾಸಿ ಆಗಿರುವ ಸೋಂಕಿತಳಿಗೆ ರೋಗಿ ಸಂಖ್ಯೆ ರೋಗಿ-3668ರಲ್ಲಿ ನೀಡಲಾಗಿದೆ.ಮಹಾರಾಷ್ಟ್ರದಿಂದ ಬಂದ ಯುವತಿಯನ್ನ ಶಿಗ್ಗಾಂವಿಯ ಜಕ್ಕಿನಕಟ್ಟಿ ಗ್ರಾಮದ ಬಳಿ ಇರುವ ರಾಣಿ ಚೆನ್ನಮ್ಮ ಸರ್ಕಾರಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮೇ 24 ರಂದು ಯುವತಿಯ ಸ್ವ್ಯಾಬನ್ನ ಆರೋಗ್ಯ ಇಲಾಖೆ ಲ್ಯಾಬ್ ಗೆ ಕಳಿಸಿತ್ತು. ಇಂದು ಕೊರೊನಾ ದೃಢ ಎಂಬ ವರದಿ ಬಂದಿದೆ.ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 16ಕ್ಕೆ ಏರಿದಂತಾಗಿದೆ. ಜಿಲ್ಲೆಯಲ್ಲಿ 6 ಜನ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು ಕೊರೊನಾ ಸಕ್ರೀಯ ರೋಗಿಗಳ ಸಂಖ್ಯೆ 10ಕ್ಕೇರಿದಂತಾಗಿದೆ.Sign in to your account
Username or Email Address


Password

 Remember Me


