ಕಲಬುರಗಿ: ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯಿಂದಾಗಿ 4 ತಿಂಗಳ ಗಂಡು ಮಗು ಸೇರಿಸಿ ಜಿಲ್ಲೆಯ 25 ಜನರಿಗೆ ಸೋಮವಾರ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಡಿ.ಸಿ ಶರತ್ ಬಿ. ತಿಳಿಸಿದ್ದಾರೆ.ಇವರೆಲ್ಲರು ಸರ್ಕಾರಿ ಕ್ವಾರಂಟೈನ್ ನಲ್ಲಿದ್ದು, ಸೋಂಕು ಪತ್ತೆಯಾದ ಕೂಡಲೇ ಇವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.ಅಫಜಲಪುರ ತಾಲೂಕಿನ ರಾಮನಗರ ಗ್ರಾಮದ 4 ತಿಂಗಳ ಗಂಡು ಮಗು (ರೋಗಿ-3315) ಮತ್ತು ರೇವೂರ ಗ್ರಾಮದ 25 ವರ್ಷದ ಯುವಕ (ರೋಗಿ-3395) ಮತ್ತು ಚಿತ್ತಾಪುರ ತಾಲೂಕಿನ ಕಿಣ್ಣಿಸುಲ್ತಾನ ತಾಂಡಾದ 45 ವರ್ಷದ ಪುರುಷ (ರೋಗಿ-3373) ಮತ್ತು ಯಾಗಾಪುರ ತಾಂಡಾದ 16 ವರ್ಷದ ಯುವಕನಲ್ಲಿ (ರೋಗಿ-3384) ಕೋವಿಡ್-19 ಕಂಡುಬಂದಿದೆ.ಆಳಂದ ತಾಲೂಕಿನ ಹಿರೋಳಿ ತಾಂಡಾದ 22 ವರ್ಷದ ಯುವತಿ (ರೋಗಿ-3374) ಮತ್ತು 3 ವರ್ಷದ ಹೆಣ್ಣು ಮಗು (ರೋಗಿ-3375), ನರೋಣಾ ಗ್ರಾಮದ 65 ವರ್ಷದ ವೃದ್ಧೆ (ರೋಗಿ-3382) ಮತ್ತು 34 ವರ್ಷದ ಪುರುಷ (ರೋಗಿ-3383) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.ಕಾಳಗಿ ಪಟ್ಟಣದ 35 ವರ್ಷದ ಯುವಕ (ರೋಗಿ-3385), ಕಾಳಗಿ ತಾಲೂಕಿನ ಮಾಳಗಿಯ 20 ವರ್ಷದ ಯುವಕ (ರೋಗಿ-3386), ಕಲ್ಲಹಿಪ್ಪರಗಾ ಗ್ರಾಮದ 32 ವರ್ಷದ ಯುವಕ (ರೋಗಿ-3387), ವಚ್ಚಾ ಗ್ರಾಮದ 30 ವರ್ಷದ ಯುವಕನಿಗೆ (ರೋಗಿ-3388) ಮಹಾಮಾರಿ ಸೋಂಕು ಅಂಟಿಕೊಂಡಿದೆ.ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದ 26 ವರ್ಷದ ಯುವಕ (ರೋಗಿ-3389), 20 ವರ್ಷದ ಯುವಕ (ರೋಗಿ-3390), 20 ವರ್ಷದ ಯುವಕ (ರೋಗಿ-3391) ಹಾಗೂ ಮುಕರಂಬಾ ಗ್ರಾಮದ 19 ವರ್ಷದ ಯುವಕ (ರೋಗಿ-3392) ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಕಲಬುರಗಿ ನಗರದ ನ್ಯೂ ಬ್ಯಾಂಕ್ ಕಾಲೋನಿಯ 25 ವರ್ಷದ ಯುವಕ (ರೋಗಿ-3396), ಸೇಡಂ ಪಟ್ಟಣದ 54 ವರ್ಷದ ಪುರುಷ (ರೋಗಿ-3393) ಮತ್ತು 44 ವರ್ಷದ ಪುರುಷನಿಗೆ (ರೋಗಿ-3394) ಕೊರೊನಾ ವೈರಸ್ ಪತ್ತೆಯಾಗಿದೆ.ಕಮಲಾಪುರ ತಾಲೂಕಿನ ವಿ.ಕೆ.ಸಲಗರ್ ಗ್ರಾಮದ 7 ವರ್ಷದ ಬಾಲಕ (ರೋಗಿ-3376), 8 ವರ್ಷದ ಬಾಲಕಿ (ರೋಗಿ-3377), 12 ವರ್ಷದ ಬಾಲಕಿ (ರೋಗಿ-3378), 15 ವರ್ಷದ ಬಾಲಕಿ (ರೋಗಿ-3379), 35 ವರ್ಷದ ಮಹಿಳೆ (ರೋಗಿ-3380) ಹಾಗೂ 45 ವರ್ಷದ ಪುರುಷನಿಗೆ (ರೋಗಿ-3381) ಮಹಾಮಾರಿ ಕೊರೋನಾ ಸೋಂಕು ದೃಢವಾಗಿದೆ.ಇದರಿಂದ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 305ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 128 ಜನ ಗುಣಮುಖರಾಗಿ ಈಗಾಗಲೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 170 ಸಕ್ರೀಯ ರೋಗಿಗಳಿದ್ದಾರೆ ಎಂದು ಶರತ್ ಬಿ. ವಿವರಿಸಿದರು.Sign in to your account
Username or Email Address


Password

 Remember Me


