ವಿಜಯಪುರ: 13 ವರ್ಷದ ಬಾಲಕಿ ಮಗುವಿನ ಜನ್ಮ ನೀಡಿರುವ ಘಟನೆ ಜಿಲ್ಲೆಯ ಸಿಂದಗಿಯಲ್ಲಿ ನಡೆದಿದೆ. ಮೇ 30ರಂದು ಬಾಲಕಿ ಸಿಂದಗಿ ತಾಲುಕೂ ಆಸ್ಪತ್ರೆಯಲ್ಲಿ ಮಗುವಿನ ಜನ್ಮ ನೀಡಿದ ಬಳಿಕ ಅಪ್ರಾಪ್ತೆ ತಾಯಿ ದೂರು ದಾಖಲಿಸಿದ್ದಾರೆ.ಬಾಲಕಿಯ ತಾಯಿ ಬೆಂಗಳೂರಿನಲ್ಲಿ ತನ್ನ ಮೂರು ಮಕ್ಕಳೊಂದಿಗೆ ವಾಸವಾಗಿದ್ದರು. ತಾಯಿ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಡ್ತಿದ್ದ ಕಾಮುಕ ಅಂಕಲ್ ಬಾಲಕಿಯ ಜೊತೆ ಸಲುಗೆ ಬೆಳೆಸಿಕೊಂಡಿದ್ದಾನೆ. ಆರೋಪಿ ಸಹ ಸಿಂದಗಿ ಮೂಲದವನಾಗಿದ್ದರಿಂದ ಬಾಲಕಿ ಆತನೊಂದಿಗೆ ಒಡನಾಟ ಹೊಂದಿದ್ದಾಳೆ. ಮದುವೆಯಾಗೋದಾಗಿ ನಂಬಿಸಿ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಪ್ರಾಪ್ತೆ ತಾಯಿ ಮಕ್ಕಳೊಂದಿಗೆ ಸ್ವಗ್ರಾಮಕ್ಕೆ ಆಗಮಿಸಿದ್ದಳು. ಮೇ 30ರಂದು ಬಾಲಕಿಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಪೊಲೀಸರು ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


