ಕೊಪ್ಪಳ: ಪಾಪಿ ಮಗನೊಬ್ಬ ಮಲಗಿದ್ದ ಹೆತ್ತ ತಂದೆ-ತಾಯಿಯನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕನಕಗಿರಿಯಲ್ಲಿ ನಡೆದಿದೆ.ಗಿರಿಯಪ್ಪ (65) ಮತ್ತು ಅಕ್ಕಮ್ಮ (60) ಮೃತ ಪೋಷಕರು. ಆರೋಪಿ ಮಗ ರಮೇಶ್ ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಆರೋಪಿ ರಮೇಶ್ ಪತ್ನಿ ತವರು ಮನೆ ಹೋಗಿದ್ದರು. ಈ ವೇಳೆ ಪೋಷಕರಿಗೆ ಆರೋಪಿ ರಮೇಶ್ ಪತ್ನಿಯನ್ನು ಮನೆಗೆ ಕರೆದುಕೊಂಡು ಬರುವಂತೆ ಒತ್ತಾಡ ಹಾಕುತ್ತಿದ್ದನು. ಆಗ ತಂದೆ ಗಿರಿಯಪ್ಪ ನೀನು ಮೊದಲು ಕೆಲಸ ಮಾಡು ನಂತರ ಕರೆದುಕೊಂಡು ಬರುತ್ತೀವಿ ಎಂದು ಹೇಳಿದ್ದರು. ರಾತ್ರಿ ಇದರಿಂದ ಕೋಪಗೊಂಡ ಆರೋಪಿ ರಮೇಶ್ ಸೋಮವಾರ ಮಲಗಿದ್ದ ಸಮಯದಲ್ಲಿ ಮಾರಕಾಸ್ತ್ರಗಳಿಂದ ಪೋಷಕರ ಮೇಲೆ ಹಲ್ಲೆ ಮಾಡಿದ್ದಾನೆ.ಪರಿಣಾಮ ತಾಯಿ ಅಕ್ಕಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಗಂಭೀರವಾಗಿ ಗಾಯಗೊಂಡಿದ್ದ ತಂದೆ ಗಿರಿಯಪ್ಪನನ್ನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಗೆಯಲ್ಲಿ ಗಿರಿಯಪ್ಪ ಸಾವನ್ನಪ್ಪಿದ್ದಾರೆ.ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಕನಕಗಿರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.Sign in to your account
Username or Email Address


Password

 Remember Me


