ಶಿವಮೊಗ್ಗ: ಬಿಜೆಪಿಯಲ್ಲಿ ಯಾವುದೇ ರೀತಿಯ ಬಂಡಾಯವೂ ಇಲ್ಲ, ಭಿನ್ನಮತವೂ ಇಲ್ಲ. ಗುಂಪುಗಾರಿಕೆಯೂ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.ಶಿವಮೊಗ್ಗಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, 9 ವಿಧಾನಪರಿಷತ್ ಹಾಗೂ 4 ರಾಜ್ಯಸಭಾ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಹಜವಾಗಿಯೇ ವಿವಿಧ ಸಮಾಜದವರು ತಮಗೆ ಟಿಕೆಟ್ ಕೊಡಿ ಎಂದು ಒತ್ತಡ ಮತ್ತು ಮನವಿ ಮಾಡುತ್ತಿದ್ದಾರೆಯೇ ವಿನಃ ಇದೇನೂ ಹೊಸದಲ್ಲ ಎಂದಿದ್ದಾರೆ.ಟಿವಿಯಲ್ಲಿ ಬರುತ್ತಿರುವ ಸಭೆಯ ದೃಶ್ಯಗಳು ತುಂಬಾ ಹಳೆಯದಾಗಿದೆ. ಹಾಗಾಗಿ ಯಾವ ಗುಂಪುಗಾರಿಕೆಯೂ ಬಿಜೆಪಿಯಲ್ಲಿ ಇಲ್ಲ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ನಮಗೆ ಮಾತು ಕೊಟ್ಟಂತೆ ಸಚಿವ ಸ್ಥಾನ ನೀಡಿದ್ದಾರೆ. ನಾವು ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತಿದ್ದೇವೆ ಮತ್ತು ನಮ್ಮ ಜೊತೆನಲ್ಲಿ ಬಿಜೆಪಿ ಸೇರಿದ ಇನ್ನುಳಿದ ಮೂವರು ಅರ್ಹ ಶಾಸಕರಿಗೂ ಕೂಡ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.Sign in to your account
Username or Email Address


Password

 Remember Me


