ಬೆಂಗಳೂರು: “ಸಲೂನ್ ಅಂಗಡಿಯಲ್ಲಿ ಕಟ್ಟಿಂಗ್ ಮಾಡಿಸಿದ ವ್ಯಕ್ತಿಗೆ ಕೊರೊನಾ ಬಂದಿದೆ. ಬೆಂಗಳೂರಿನ ವಿವೇಕಾನಗರದ ಈ ಸಲೂನ್ ಅಂಗಡಿಯಲ್ಲಿ ಕಟ್ಟಿಂಗ್ ಮಾಡಿಸಿದ ವ್ಯಕ್ತಿಗಳು ಕೂಡಲೇ ಆಸ್ಪತ್ರೆಗೆ ತೆರಳಿ”.ಈ ರೀತಿಯ ಸಾಲನ್ನು ಬರೆದಿರುವ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ನಲ್ಲಿ ವೈರಲ್ ಆಗಿದೆ. ಆದರೆ ಇದು ಬೆಂಗಳೂರಿನ ವಿಡಿಯೋವಲ್ಲ.ವಿಡಿಯೋದಲ್ಲಿರುವ ವಿಚಾರವನ್ನು ಖಚಿತ ಪಡಿಸಲು ಬಿಬಿಎಪಿಯನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದೆ. ಈ ವೇಳೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿಯ ಮುಖ್ಯ ಆರೋಗ್ಯ ಅಧಿಕಾರಿ ವಿಜಯೇಂದ್ರ, ಈ ವಿಡಿಯೋ ನಮ್ಮ ಬಿಬಿಎಂಪಿ ವ್ಯಾಪ್ತಿಯದ್ದು ಅಲ್ಲ. ಯಾರೋ ಜನರನ್ನ ಹೆದರಿಸಲು ಈ ರೀತಿ ಮಾಡಿದ್ದಾರೆ. ನಮ್ಮ ಅಧಿಕಾರಿಗಳು ಯಾರು ಈ ರೀತಿಯಾಗಿ ಅನೌನ್ಸ್ ಮಾಡೋದಿಲ್ಲ. ಈ ರೀತಿ ಮಾಡಿ ಜನರಿಗೆ ಭಯ ಹುಟ್ಟಿಸಿದವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.ಇದು ಮೂಲತಃ ಕೋಲಾರದ ಬಂಗಾರಪೇಟೆಯ ವಿಡಿಯೋ. ಅಲ್ಲಿ ಸಲೂನ್ ಶಾಪ್‍ಗೆ ತೆರಳಿದ ವ್ಯಕ್ತಿಗೆ ಪಾಸಿಟಿವ್ ಬಂದಿತ್ತು. ಈ ವೇಳೆ ರಾತ್ರಿ ಮೈಕ್ ಮೂಲಕ ಜನರಿಗೆ ಮಾಹಿತಿ ನೀಡಲಾಗಿದೆ.ವಿಡಿಯೋದಲ್ಲಿ ಏನಿದೆ?
ಮೇ 31ರಂದು ಸೂಪರ್ ಜೆಂಟ್ಸ್ ಸಲೂನ್ ಅಂಗಡಿಯಲ್ಲಿ ಶೇವಿಂಗ್ ಮತ್ತು ಕಟ್ಟಿಂಗ್ ಮಾಡಿಸಿದ ವ್ಯಕ್ತಿಗೆ ಕೊರೊನಾ ಬಂದಿದೆ. ಹೀಗಾಗಿ ಈ ದಿನ ಯಾರೆಲ್ಲ ಶೇವಿಂಗ್ ಮತ್ತು ಕಟ್ಟಿಂಗ್ ಮಾಡಿದ್ದಾರೋ ಅವರೆಲ್ಲ ಕೂಡಲೇ ಸರ್ಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕೆಂದು ಅಧಿಕಾರಿಗಳು ಮನವಿ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.Sign in to your account
Username or Email Address


Password

 Remember Me


