ಶಿವಮೊಗ್ಗ: ಕೊರೊನಾ ಸೋಂಕಿನಿಂದ ಗುಣಮುಖರಾದ 17 ಮಂದಿಯನ್ನು ಇಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಕೋವಿಡ್-19 ವಿಭಾಗದಿಂದ ಬಿಡುಗಡೆ ಮಾಡಲಾಯಿತು.ಕೊನೆಯ ಹಂತದ ತಪಾಸಣೆ ಬಳಿಕ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ 17 ಜನರನ್ನು ಆಸ್ಪತ್ರೆಯಿಂದ ಹೋಮ್ ಕ್ವಾರಂಟೈನ್‍ಗೆ ಶಿಫ್ಟ್ ಮಾಡಲಾಯಿತು. ತೀರ್ಥಹಳ್ಳಿ ಮೂಲದ ರೋಗಿ ನಂ.1126, 1127, 1297, 1298, 1299, 1301 ಒಟ್ಟು 6 ಜನ. ಶಿವಮೊಗ್ಗ ಮೂಲದ ರೋಗಿ ನಂ.1305 (ಕುಂಸಿ), 1300 (ಕೂಡ್ಲಿ), 1503, 1302 (ಸೂಳೆಬೈಲು) ಒಟ್ಟು 4 ಜನ ಡಿಸ್ಚಾರ್ಜ್ ಆಗಿದ್ದಾರೆ.ಹೊಸನಗರ ಮೂಲದ 3 ಜನ ರೋಗಿ ನಂ.1089, 1090, 1308, ಸೊರಬದ ಇಬ್ಬರು ರೋಗಿ ನಂ.1498, 1734, ಶಿಕಾರಿಪುರ ಮೂಲದ ರೋಗಿ ನಂ.1304 ಹಾಗೂ ಸಾಗರದ ರೋಗಿ ನಂ.1088 ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಡಿಸ್ಚಾರ್ಜ್ ಆದ 17 ಮಂದಿಯನ್ನು 24 ಗಂಟೆಯಲ್ಲಿ ಎರಡು ಬಾರಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಎರಡೂ ವರದಿಯಲ್ಲಿ ನೆಗೆಟಿವ್ ಬಂದಿದೆ. ಶಿವಮೊಗ್ಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರು ಗುಣಮುಖವಾಗಿ ಡಿಸ್ಚಾರ್ಜ್ ಆಗುತ್ತಿರುವುದು ಇದೇ ಮೊದಲು. ಈ ಮೂಲಕ ಕೇವಲ ಒಂದೇ ವಾರದಲ್ಲಿ 24 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ.ಶಿವಮೊಗ್ಗದಲ್ಲಿ ಒಟ್ಟು 41 ಸೋಂಕಿತರು ಇದ್ದರು. ಈ ಪೈಕಿ ಮೇ 25ರಂದು ನಾಲ್ಕು ಮಂದಿ ಡಿಸ್ಚಾರ್ಜ್ ಆಗಿದ್ದರು. ಮೇ 29ರಂದು ಮೂವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಈಗ ಮೂರನೇ ಹಂತದಲ್ಲಿ 17 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 17ಕ್ಕೆ ಇಳಿಕೆಯಾಗಿದೆ.Sign in to your account
Username or Email Address


Password

 Remember Me


