ಬೆಂಗಳೂರು: ಸೋಮವಾರದಿಂದ ವೋಲ್ವೋ ಬಸ್‍ಗಳು ರಸ್ತೆಗಿಳಿಯಲಿದ್ದು, 8 ಮಾರ್ಗಗಳಲ್ಲಿ ಸಂಚಾರ ಮಾಡಲಿವೆ.ವೋಲ್ವೋ ಬಸ್‍ಗಳ ಸಂಚಾರಕ್ಕೆ ರಾಜ್ಯ ಸರ್ಕಾರದಿಂದ ಶುಕ್ರವಾರವೇ ಅನುಮತಿ ಸಿಕ್ಕಿತ್ತು. ಆದರೆ ಎಲ್ಲಿ ಎಸಿ ಬಸ್‍ಗಳನ್ನ ಓಡಿಸಬೇಕು ಎನ್ನುವ ಬಗ್ಗೆ ಬಿಎಂಟಿಸಿಯಿಂದ ಚಿಂತನೆ ನಡೆದಿತ್ತು. ಸದ್ಯ ಸಾರಿಗೆ ಇಲಾಖೆಯ ಮಾರ್ಗದರ್ಶನದ ಪ್ರಕಾರ ವಿಮಾನ ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ ಬಸ್‍ಗಳು ಸಂಚರಿಸಲಿದ್ದು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಸಿಬ್ಬಂದಿಯ ಸಂಚಾರಕ್ಕೆ ಅನುಕೂಲವಾಗಲಿದೆ.ಸುಮಾರು 800ಕ್ಕೂ ಹೆಚ್ಚು ಎಸಿ, ವೋಲ್ವೋ ಬಸ್‍ಗಳು ಲಾಕ್‍ಡೌನ್ ಆದಾಗಿನಿಂದ ನಿಂತಲ್ಲೇ ನಿಂತಿದ್ದವು. ಈ ಪೈಕಿ ಮೊದಲಿಗೆ 75 ಬಸ್‍ಗಳನ್ನು ರಸ್ತೆಗಿಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.ಎಲ್ಲಿಂದ ಎಲ್ಲಿಗೆ ಸಂಚಾರ?
ಮೆಜೆಸ್ಟಿಕ್ – ಹೊಸಕೋಟೆ
ಮೆಜೆಸ್ಟಿಕ್ – ಕಾಡುಗೋಡಿ
ಮೆಜೆಸ್ಟಿಕ್ – ಸರ್ಜಾಪುರ
ಮೆಜೆಸ್ಟಿಕ್ – ಅತ್ತಿಬೆಲೆ
ಹೆಬ್ಬಾಳ – ಬನಶಂಕರಿ
ಹೆಬ್ಬಾಳ – ಸಿಲ್ಕ್ ಬೋರ್ಡ್
ಬನಶಂಖರಿ – ಐಟಿಪಿಎಲ್
ಎಲೆಕ್ಟ್ರಾನಿಕ್ ಸಿಟಿ – ಐಟಿಪಿಎಲ್Sign in to your account
Username or Email Address


Password

 Remember Me


