ಚಿಕ್ಕೋಡಿ(ಬೆಳಗಾವಿ): ಕೊರೊನಾ ವುಹಾಮಾರಿ ಜಂಜಾಟದ ನಡುವೆಯೇ ರಾಜ್ಯ ರಾಜಕೀಯದಲ್ಲಿ ತಲ್ಲಣವೇರ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ಉಮೇಶ್ ಕತ್ತಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬುಲಾವ್ ನೀಡಿದ್ದಾರೆ.ಉಮೇಶ್ ಕತ್ತಿಗೆ ಕರೆ ಮಾಡಿರುವ ಸಿಎಂ, ಎಲ್ಲಾ ನಿನ್ನಿಂದಲೇ ಆಗುವುದು ಎಂದು ಗರಂ ಆಗಿದ್ದಾರೆ. ಅಲ್ಲದೆ ಒಂದು ಗಂಟೆ ಒಳಗೆ ಮನೆಗೆ ಬರುವಂತೆ ಸಿಎಂ ತಿಳಿಸಿದ್ದಾರೆ. ನಿಮ್ಮ ಸಹೋದರನನ್ನು ರಾಜ್ಯ ಸಭೆ ಸದಸ್ಯ ಹಾಗೂ ನಿಮ್ಮನ್ನ ಸಚಿವರನ್ನಾಗಿ ಮಾಡುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಬನ್ನಿ ಇಲ್ಲಿಯೇ ಕುಳಿತು ಮಾತಾಡೋಣ ಎಂಬುದಾಗಿ ಸಿಎಂ ಬುಲಾವ್ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಉಮೇಶ್ ಕತ್ತಿ ಆಪ್ತ ಮೂಲಗಳು ಮಾಹಿತಿ ನೀಡಿವೆ.ಸಿಎಂ ಬುಲಾವ್ ಬೆನ್ನಲ್ಲೇ ಉಮೇಶ್ ಕತ್ತಿ ಅವರು ಸಿಎಂ ಮನೆಗೆ ತೆರಳಲು ಸಿದ್ಧವಾಗಿದ್ದು, ಈ ಕುರಿತು ಶಾಸಕ ಮುರಗೇಶ್ ನಿರಾಣಿ ಜೊತೆ ಉಮೇಶ್ ಕತ್ತಿ ಚರ್ಚೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಂಡಾಯ ಅಲ್ಲ, ಕೊಟ್ಟ ಮಾತು ನೆನಪಿಸಿದ್ದೇವೆ: ಉಮೇಶ್ ಕತ್ತಿ ಸೋದರ ರಮೇಶ್ ಕತ್ತಿSign in to your account
Username or Email Address


Password

 Remember Me


