ಬೆಂಗಳೂರು: ಬಹುತೇಕ ಕಲಾವಿದರು ಲಾಕ್‍ಡೌನ್ ದಿನಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ತಮ್ಮದೇಯಾದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ದಿನದೂಡುತ್ತಿದ್ದಾರೆ. ಹಲವರು ಬರವಣಿಗೆ, ಚಿತ್ರ ಬಿಡಿಸುವುದು, ಸಾಮಾಜಿಕ ಸೇವೆ ಹೀಗೆ ಬಗೆ ಬಗೆಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಶ್ರೀ ಮುರಳಿ ಆ್ಯಂಡ್ ಪ್ರಶಾಂತ್ ನೀಲ್ ಟೀಮ್ ಕ್ರೇಜಿ ಕೆಲಸ ಮಾಡುವುದರಲ್ಲಿ ಬ್ಯುಸಿಯಾಗಿದೆ.ಲಾಕ್‍ಡೌನ್ ಹಿನ್ನೆಲೆ ಇನ್ನೂ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಎಲ್ಲ ನಟ, ನಟಿಯರು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಕುಟುಂಬಕ್ಕೆ ಸಮಯ ನೀಡುತ್ತಿದ್ದಾರೆ. ಇದರ ಮಧ್ಯೆಯೇ ಸಾಮಾಜಿಕ ಸೇವೆಯನ್ನೂ ಮಾಡುತ್ತಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮಕ್ಕಳೊಂದಿಗೆ ಹಾಗೂ ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಹ ಹಂಚಿಕೊಂಡಿದ್ದಾರೆ.ಅದೇ ರೀತಿ ಶ್ರೀ ಮುರಳಿ ಸಹ ತಂದೆ, ತಾಯಿ ಹಾಗೂ ಮಕ್ಕಳೊಂದಿಗೆ ಕಾಲಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಅಪ್‍ಡೇಟ್ ಸಹ ನೀಡುತ್ತಿದ್ದಾರೆ. ಇತ್ತೀಚೆಗೆ ಪ್ರಶಾಂತ್ ನೀಲ್ ಅವರ ಜೊತೆಗಿದ್ದ ಫೋಟೋವನ್ನೂ ಹಾಕಿದ್ದರು. ಆದರೆ ಈ ವಿಡಿಯೋ ಹಾಕಿರಲಿಲ್ಲ. ಇದೀಗ ಈ ವಿಡಿಯೋವನ್ನು ನಿರ್ದೇಶಕ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಚರ್ಚೆ ನಡೆಯುತ್ತಿದೆ.ಹೌದು ಶ್ರೀ ಮುರುಳಿಯವರು ಹಾಡು ಹೇಳಿರುವ ವಿಡಿಯೋವನ್ನು ಪ್ರಶಾಂತ್ ನೀಲ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಾಕಿದ್ದಾರೆ. ಈ ವಿಡಿಯೋ ನೋಡಿದರೆ ನೀವೂ ಸಹ ಖಂಡಿತ ಹೊಟ್ಟೆ ಹುಣ್ಣಾಗುವಂತೆ ನಗುತ್ತೀರಿ. ವಿಡಿಯೋದಲ್ಲಿ ಶ್ರೀ ಮುರಳಿ ಇಂಗ್ಲಿಷ್ ಹಾಡೊಂದನ್ನು ಹಾಡಿದ್ದು, ಅವರ ಹಾಡಿನ ಶೈಲಿಗೆ ಕುಟುಂಬದ ಸದಸ್ಯರೆಲ್ಲ ಬಿದ್ದೂ, ಬಿದ್ದೂ ನಕ್ಕಿದ್ದಾರೆ. ಈ ಮೂಲಕ ಎಂಜಾಯ್ ಮಾಡಿದ್ದಾರೆ.ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪರೆದಿರುವ ಪ್ರಶಾಂತ್ ನೀಲ್, ಲಾಕ್‍ಡೌನ್ 4 ವಿತ್ ಕ್ರೇಜೀಸ್, ಬಾಸ್ ರೀತಿ ಅಗಸ್ತ್ಯ ಹಾಡುತ್ತಿದ್ದರೆ, ಶ್ರೀಮುರಳಿ ಆಸ್ಕರ್ ಪರ್ಫಾರ್ಮೆನ್ಸ್ ನೀಡಿದ್ದಾರೆ. ಸಾಂಗ್: ವೇ ಡೌನ್ ವಿಯ್ ಗೋ ಲೋಗನ್ ಟ್ರೇಲರ್ ಕಟ್ ಎಂದು ಬರೆದುಕೊಂಡಿದ್ದು, ಹಾರ್ಟ್ ಸಿಂಬಲ್ ಹಾಕಿದ್ದಾರೆ. ಇದಕ್ಕೆ ಶ್ರೀಮುರಳಿ ಸಹ ಎಮೋಜಿಗಳ ಮೂಲಕ ರಿಪ್ಲೈ ಮಾಡಿದ್ದಾರೆ. ಈ ಕುರಿತು ಹಲವರು ಕಮೆಂಟ್ ಮಾಡುತ್ತಿದ್ದಾರೆ.  Lockdown #4 with the crazies???? When agastya can sing like a boss???? @sriimurali Oscar performance ????❤ Song : way down we go (kaleo) logan trailer cut????A post shared by  Prashanth Neel (@prashanthneel) on May 26, 2020 at 8:42am PDTಸದ್ಯ ಮದಗಜ ಚಿತ್ರದಲ್ಲಿ ಶ್ರೀ ಮುರಳಿ ಬ್ಯುಸಿ ಇದ್ದು, ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತಗೊಂಡಿದೆ. ಇತ್ತ ಪ್ರಶಾಂತ್ ನೀಲ್ ಕೆಜಿಎಫ್-2 ಚಿತ್ರದ ಫೈನಲ್ ಹಂತದ ಚಿತ್ರೀಕರಣದಲ್ಲಿ ತೊಡಗಿದ್ದರು. ಇದೂ ಸಹ ಸ್ಥಗಿತಗೊಂಡಿದೆ. ಇದರ ಜೊತೆಗೆ ಸಂತಸದ ವಿಚಾರವೆಂದರೆ ತೆಲುಗು ನಟ ಜೂ.ಎನ್‍ಟಿಆರ್ ಜೊತೆಗೆ ಸಿನಿಮಾ ಮಾಡುವ ಕುರಿತು ಪ್ರಶಾಂತ್ ನೀಲ್ ಸುಳಿವು ನೀಡಿದ್ದಾರೆ.Sign in to your account
Username or Email Address


Password

 Remember Me


