ಯಾದಗಿರಿ: ಜಿಲ್ಲೆಯಲ್ಲಿ ಇಂದು 4 ವರ್ಷ ಮಗು ಹಾಗೂ 11 ವರ್ಷದ ಬಾಲಕ ಸೇರಿದಂತೆ ಒಟ್ಟು 7 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ.ಸುರಪುರ ತಾಲೂಕಿನ ಬೇವಿನಾಳ ಎಸ್.ಕೆ. ಗ್ರಾಮದ 28 ವರ್ಷದ ಯುವಕ ರೋಗಿ ನಂ.2475, 24 ವರ್ಷದ ಪುರುಷ ರೋಗಿ ನಂ.2476, 28 ವರ್ಷದ ಪುರುಷ ರೋಗಿ ನಂ.2477, ಯಾದಗಿರಿ ತಾಲೂಕಿನ ಸೈದಾಪೂರ ಗ್ರಾಮದ 24 ವರ್ಷದ ಮಹಿಳೆ ರೋಗಿ ನಂ.2478, ಶಹಾಪೂರ ತಾಲೂಕಿನ ಉಕ್ಕಿನಾಳ ತಾಂಡಾದ 4 ವರ್ಷದ ಗಂಡು ಮಗು ರೋಗಿ ನಂ.2479, ಗುರುಮಠಕಲ್ ನಗರದ 46 ವರ್ಷದ ಪುರುಷ ರೋಗಿ ನಂ.2480, ಯಾದಗಿರಿ ತಾಲೂಕಿನ ಮೋಟನಳ್ಳಿ ತಾಂಡಾದ 11 ವರ್ಷದ ಬಾಲಕ ರೋಗಿ ನಂ.2481 ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತು ಸೊಲ್ಲಾಪುರಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರಿಗೆ ಕೊರೊನಾ ಸೋಂಕು ಖಚಿತಪಟ್ಟ ಒಟ್ಟು 163 ಪ್ರಕರಣಗಳ ಪೈಕಿ 9 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.Sign in to your account
Username or Email Address


Password

 Remember Me


