ಉಡುಪಿ: ದುಬೈನಿಂದ ಉಡುಪಿಗೆ ಬಂದ ಗರ್ಭಿಣಿಗೆ ಕ್ವಾರಂಟೈನ್ ಅವಧಿ ಮುಗಿದಿದ್ದರೂ ಅವರನ್ನು ಮನೆಗೆ ಕಳುಹಿಸಲಿಲ್ಲ. ಉಡುಪಿ ಡಿಸಿ ಜಿ ಜಗದೀಶ್ ಬೇಜವಾವ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ.ಗರ್ಭಿಣಿ ಉಡುಪಿಯ ಲಾಡ್ಜ್‍ನಲ್ಲಿ 15 ದಿನಗಳ ಕ್ವಾರಂಟೈನ್ ಪೂರೈಸಿದ್ದಾರೆ. ಅವಧಿ ಮುಗಿದರೂ ಅವರನ್ನು ಇನ್ನೂ ಅಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲಾಡಳಿತ ಸರ್ಕಾರಿ ನಿಯಮ ಪಾಲಿಸಿಲ್ಲ. ಒಂದೆಡೆ ಮನೆಗೆ ಕಳುಹಿಸಿಲ್ಲ. ಇನ್ನೊಂದೆಡೆ ಮನೆಯ ಅಹಾರಕ್ಕೂ ತಡೆ ನೀಡಿದೆ. ಇದರ ವಿರುದ್ಧ ಪ್ರಮೋದ್ ಮಧ್ವರಾಜ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ.One pregnant lady who came from Dubai has been sent for hotel quarantine against the rules of the Govt and it is 15 days and she has not been sent home and even home food has been stopped to her . Take action against @dcudupi for his irresponsibility.@BSYBJP https://t.co/dFVvqQrQpJ— Pramod Madhwaraj (@PMadhwaraj) May 27, 2020ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತದ, ಆರೋಗ್ಯ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟ್ವಿಟ್ಟರ್ ನಲ್ಲಿ ಗುಡುಗಿದ್ದಾರೆ.Sign in to your account
Username or Email Address


Password

 Remember Me


