ಯಾದಗಿರಿ: ಕೊರೊನಾ ವೈರಸ್‍ನಿಂದ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲೆಯ 2 ವರ್ಷದ ಗಂಡು ಮಗು ಸೇರಿದಂತೆ 9 ಜನ ಗುಣಮುಖರಾಗಿದ್ದಾರೆ. ಇಂದು ಅವರನ್ನು ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 140 ಪ್ರಕರಣಗಳ ಪೈಕಿ, ಪ್ರಸ್ತುತ 131 ಪ್ರಕರಣಗಳು ಸಕ್ರಿಯವಾಗಿವೆ.ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾಮದ 30 ವರ್ಷದ ಪುರುಷ ರೋಗಿ ನಂ.1139, ಶಹಾಪುರ ತಾಲೂಕಿನ ಚಂದಾಪುರ ತಾಂಡಾದ 22 ವರ್ಷದ ಪುರುಷ ರೋಗಿ ನಂ.1140, ಶಹಾಪುರ ತಾಲ್ಲೂಕಿನ ಕನ್ಯಾಕೋಳೂರು ಗ್ರಾಮದ 34 ವರ್ಷದ ಪುರುಷ ರೋಗಿ ನಂ.1141, ಗುರುಮಠಕಲ್ ತಾಲೂಕಿನ ಬದ್ದೇಪಲ್ಲಿ ತಾಂಡಾದ 25 ವರ್ಷದ ಮಹಿಳೆ ರೋಗಿ ನಂ.1188, 25 ವರ್ಷದ ಪುರುಷ ರೋಗಿ ನಂ.1189, 20 ವರ್ಷದ ಪುರುಷ ರೋಗಿ ನಂ.1190, 15 ವರ್ಷದ ಯುವಕ ರೋಗಿ ನಂ.1191, 30 ವರ್ಷದ ಪುರುಷ ರೋಗಿ ನಂ.1192 ಒಟ್ಟು ಐವರು ಬದ್ದೇಪಲ್ಲಿ ತಾಂಡಾದವರು ಬಿಡುಗಡೆಯಾಗಿದ್ದಾರೆ.ಯಾದಗಿರಿ ತಾಲೂಕಿನ ಚಿನ್ನಾಕಾರ ಗ್ರಾಮದ 2 ವರ್ಷದ ಗಂಡು ಮಗು ರೋಗಿ ನಂ.1256 ಗುಣಮುಖವಾಗಿದೆ. ನಗರದ ಮುದ್ನಾಳ ಬಳಿ ಇರುವ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎಲ್ಲ ರೋಗಿಗಳಿಗೆ ಹೂ ಗುಚ್ಛ ನೀಡಿ, ಚಪ್ಪಾಳೆ ತಟ್ಟಿ ಬೀಳ್ಕೊಡಲಾಗಿದೆ. ಡಿಸಿ, ಎಸ್‍ಪಿ, ಸಿಇಓ ಮತ್ತು ಡಿಎಚ್‍ಓ ಅವರು ಹೂ ಗುಚ್ಛ ನೀಡಿ, ಚಪ್ಪಾಳೆ ತಟ್ಟಿ ಗುಣಮುಖರಾದವರನ್ನು ಬೀಳ್ಕೊಟ್ಟಿದ್ದಾರೆ. ಇದೇ ವೇಳೆ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಕೊರೊನಾ ವಾರಿಯರ್ಸ್ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.Sign in to your account
Username or Email Address


Password

 Remember Me


