ಮೈಸೂರು: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಇಬ್ಬರನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೋಟೆಹುಂಡಿ ಬಳಿ ಈ ಘಟನೆ ನಡೆದಿದ್ದು, ಮಂಜುನಾಥ್.ಟಿ (33) ಹಾಗೂ ಮಂಜುನಾಥ್.ಆರ್ (35) ಕೊಲೆಯಾದವರು. ಲಗ್ಗೇಜ್ ಆಟೋ ಹಾಗೂ ಪ್ಯಾಸೆಂಜರ್ ಆಟೋ ಪರಸ್ಪರ ಡಿಕ್ಕಿ ಹೊಡೆದಿದೆ. ಈ ವೇಳೆ ಉಂಟಾದ ಜಗಳದಲ್ಲಿ ಪ್ಯಾಸೆಂಜರ್ ಆಟೋ ಚಾಲಕ ಯೋಗೇಶ್ (23) ಇಬ್ಬರನ್ನು ಕೊಲೆ ಮಾಡಿದ್ದಾನೆ.ಲಗ್ಗೇಜ್ ಆಟೋದಲ್ಲಿ ಮೃತ ಮಂಜುನಾಥ್.ಆರ್, ಮೂರ್ತಿ ಹಾಗೂ ಮಂಜುನಾಥ್.ಟಿ ಹೋಗುತ್ತಿದ್ದರು. ಆದರೆ ಕೋಟೆಹುಂಡಿ ಬಳಿ ಪ್ಯಾಸೆಂಜರ್, ಆಟೋಗೆ ಲಗ್ಗೇಜ್ ಪರಸ್ಪರ ಡಿಕ್ಕಿ ಹೊಡೆದಿವೆ . ಈ ವೇಳೆ ಗಲಾಟೆ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಪ್ಯಾಸೆಂಜರ್ ಆಟೋ ಚಾಲಕ ಯೋಗೇಶ್ ಚಾಕುವಿನಿಂದ ಮಂಜುನಾಥ್.ಟಿ ಮತ್ತು ಮಂಜುನಾಥ್.ಆರ್ ಇಬ್ಬರಿಗೂ ಇರಿದು ಕೊಲೆ ಮಾಡಿದ್ದಾನೆ.ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಆರೋಪಿ ಯೋಗೇಶ್‍ನನ್ನು ಬಂಧಿಸಿದ್ದಾರೆ.Sign in to your account
Username or Email Address


Password

 Remember Me


