ಬೆಂಗಳೂರು: ಕೊರೊನಾ ಮಹಾಮಾರಿ ರಾಜ್ಯಕ್ಕೆ ಒಕ್ಕರಿಸಿ ತಾಂಡವವಾಡುತ್ತಿದ್ದರೂ ಜನ ಮಾತ್ರ ಕ್ಯಾರೇ ಅಂತಿಲ್ಲ. ಕೈಗೆ ಸೀಲ್ ಹಾಕಿ ಕ್ವಾರಂಟೈನ್ ನಲ್ಲಿ ಇರಿ ಅಂದರೂ ಜನ ಮಾತ್ರ ಹೊರಗಡೆ ಓಡಾಡುತ್ತಾನೆ ಬಂದಿದ್ದಾರೆ. ಇಂದು ಕೂಡ ಇದೇ ರೀತಿಯಲ್ಲಿ ದಂಪತಿ ಮೆಜೆಸ್ಟಿಕ್ ನಲ್ಲಿ ಸಿಕ್ಕಿಬಿದ್ದಿದ್ದಾರೆ.ಹೈದರಾಬಾದ್‍ನಿಂದ ಆಗಮಿಸಿರೋ ದಂಪತಿ ಕ್ವಾರಂಟೈನ್ ಸೀಲ್ ಇದ್ದರೂ ಮೆಜೆಸ್ಟಿಕ್‍ನಲ್ಲಿ ಓಡಾಡಿದ್ದಾರೆ. ಚಿತ್ರದುರ್ಗಕ್ಕೆ ತೆರಳಲು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಓಡಾಟ ನಡೆಸಿದ್ದಾರೆ. ಈ ವೇಳೆ ದಂಪತಿ ಕೈಯಲ್ಲಿ ಸೀಲ್‍ನೋಡಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಗಾಬರಿಗೊಳಗಾಗಿದ್ದಾರೆ. ಕೊನೆಗೆ ಆಟೋ ಮೂಲಕ ಜಯನಗರ ಸೌತ್ ಅಂಡ್‍ಗೆ ದಂಪತಿ ತೆರಳಿದ್ದಾರೆ.ಇತ್ತ ಮತ್ತೊಬ್ಬ ಹೋಮ್ ಕ್ವಾರಟೈನ್ ಕೂಡ ಮೆಜೆಸ್ಟಿಕ್ ನಲ್ಲಿ ಇಂದು ಪತ್ತೆಯಾಗಿದ್ದಾನೆ. ಟ್ರೈನ್ ಇಳಿದು ತಮ್ಮ ತಮ್ಮ ಊರಿಗೆ ಹೋಗೋದಕ್ಕೆ ಹೊರ ರಾಜ್ಯದವರು ಮೆಜೆಸ್ಟಿಕ್ ಕಡೆ ಬರುತ್ತಿದ್ದಾರೆ. ಹಾಗೆಯೇ ಉತ್ತರ ಪ್ರದೇಶದಿಂದ ಬಂದಿರುವ ವ್ಯಕ್ತಿಯೊಬ್ಬ ಬಾಗಲಕೋಟೆ ಬಸ್ ಹತ್ತಲು ಬಂದಿದ್ದಾನೆ.ಈ ವೇಳೆ ಆತನ ಕೈಯಲ್ಲಿ ಕ್ವಾರಂಟೈನ್ ಸೀಲ್ ನೋಡಿದ ಕೆಎಸ್ ಆರ್ ಟಿಸಿ ಸಿಬ್ಬಂದಿ ಖಾಸಗಿ ವಾಹನದಲ್ಲಿ ತೆರಳುವಂತೆ ಹೇಳಿದ್ದಾರೆ. ಅಲ್ಲದೆ ಮೆಜೆಸ್ಟಿಕ್ ನಿಂದ ಹೊರ ಭಾಗದಲ್ಲೇ ಪೊಲೀಸರು ಕೂಡ ಆತನನ್ನು ತಡೆದಿದ್ದಾರೆ.Sign in to your account
Username or Email Address


Password

 Remember Me


