ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಇಂದು ಬಂದ ಮೊದಲ ವಿಮಾನದಲ್ಲಿ ಐದು ವರ್ಷದ ಬಾಲಕ ಏಕಾಂಗಿಯಾಗಿ ಪ್ರಯಾಣ ಮಾಡಿದ್ದಾನೆ.ಐದು ವರ್ಷದ ವಿವಾಂತ್ ಶರ್ಮಾ ಏಕಾಂಗಿಯಾಗಿ ಪ್ರಯಾಣ ಮಾಡಿದ್ದಾನೆ. ಲಾಕ್‍ಡೌನ್ ನಂತರ ಇಂದು ರಾಷ್ಟ್ರ ರಾಜಧಾನಿಯಿಂದ ಬೆಂಗಳೂರಿಗೆ ಬಂದ ಮೊದಲ ವಿಮಾನದಲ್ಲಿ ಈ ಬಾಲಕ ಬಂದು ಬೆಂಗಳೂರಿನಲ್ಲಿರುವ ತನ್ನ ಪೋಷಕರನ್ನು ಸೇರಿದ್ದಾನೆ. ಮಗನ ಬರುವಿಕೆಗಾಗಿ ವಿಮಾನ ನಿಲ್ದಾಣದಲ್ಲೇ ಕಾದುಕುಳಿತಿದ್ದ ಆತನ ತಾಯಿ ಮಂಜೀತ್ ಶರ್ಮಾ ಮಗನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.ವಿವಾಂತ್ ಶರ್ಮಾನ ಅಜ್ಜಿ ಮನೆ ದೆಹಲಿಯಲ್ಲಿ ಇದ್ದು, ಲಾಕ್‍ಡೌನ್ ಆಗುವುದಕ್ಕೂ ಮುನ್ನವೇ ವಿವಾಂತ್ ದೆಹಲಿಗೆ ಹೋಗಿದ್ದ. ನಂತರ ಕೊರೊನಾ ಲಾಕ್‍ಡೌನ್ ಆಗಿ ಸುಮಾರು ಮೂರು ತಿಂಗಳು ಅಲ್ಲಿಯೇ ಉಳಿದಿದ್ದ.ಇಂದು ಮೊದಲ ಬಾರಿಗೆ ದೆಹಲಿಯಿಂದ ಪ್ರಯಾಣಕರನ್ನು ಹೊತ್ತು ವಿಮಾನ ಬೆಂಗಳೂರಿಗೆ ಬಂದಿದ್ದು, ಇದರಲ್ಲಿ ವಿವಾಂತ್ ಕೂಡ ಇತರ ಪ್ರಯಾಣಿಕರ ಜೊತೆ ಒಬ್ಬನೇ ಬಂದಿದ್ದಾನೆ.Sign in to your account
Username or Email Address


Password

 Remember Me


