ಕಾರವಾರ: ಸೂಟ್‍ಕೇಸ್‍ನಲ್ಲಿ 15 ಲಕ್ಷ ರೂ.ಗೂ ಅಧಿಕ ಹಣ ಸಾಗಿಸುತ್ತಿದ್ದ ಕದಂಬ ನೌಕಾನೆಲೆಯ ಅಧಿಕಾರಿಯನ್ನು ನೌಕಾನೆಲೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.ನೌಕಾನೆಲೆಯಲ್ಲಿರುವ ಮಿಲಿಟರಿ ಎಂಜಿನಿಯರಿಂಗ್ ಸರ್ವಿಸ್‍ನ ಅಧಿಕಾರಿಯೋರ್ವ ನೇವಲ್ ಬೇಸ್‍ನಲ್ಲೇ 15 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣವನ್ನು ಸೂಟ್‍ಕೇಸ್‍ನಲ್ಲಿ ಬೇಸ್‍ನ ಹೊರಗಡೆ ಕೊಂಡೊಯ್ಯುತ್ತಿದ್ದ. ಈ ವೇಳೆ ಸೂಟ್‍ಕೇಸ್ ಜತೆ ಹೊರ ಬರುತ್ತಿದ್ದ ಎಂಇಎಸ್ ಅಧಿಕಾರಿಯನ್ನು ನೇವಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಎಂಇಎಸ್ ಅಧಿಕಾರಿಯನ್ನು ಹಿಡಿದು ನೇವಲ್ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಭಾರೀ ಮೊತ್ತದ ಹಣ ಎಲ್ಲಿಂದ ಬಂತು? ಎಲ್ಲಿಗೆ ಸಾಗಾಟವಾಗುತ್ತಿದೆ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಈ ಹಿಂದೆ ಅಧಿಕಾರಿಯೋರ್ವರು ಲಂಚ ಪಡೆದ ಪ್ರಕರಣ, ಬಳಿಕ ಸಿಬ್ಬಂದಿ ಪಾಕಿಸ್ತಾನಕ್ಕೆ ಮಾಹಿತಿ ನೀಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಪ್ರಸ್ತುತ ಎಂಇಎಸ್ ಅಧಿಕಾರಿಯಲ್ಲಿ ದೊರೆತಿರುವ ಹಣ ಹಲವು ಅನುಮಾನಗಳಿಗೆ ಎಡೆಮಾಡಿದ್ದು, ವಿಚಾರಣೆಯ ಬಳಿಕವೇ ಸತ್ಯಾಂಶ ತಿಳಿದುಬರಬೇಕಷ್ಟೇ ಎನ್ನಲಾಗಿದೆ.Sign in to your account
Username or Email Address


Password

 Remember Me


