ಬೆಂಗಳೂರು: ಸರ್ಕಾರದಿಂದ ಮತ್ತೊಂದು ಎಡವಟ್ಟು ಆಗಿದ್ದು, ಸೇವಾಸಿಂಧುನಲ್ಲಿ ತವರು ರಾಜ್ಯಗಳಿಗೆ ಹೋಗಲು ಅರ್ಜಿ ಸಲ್ಲಿಸಿದವರಿಗೆ ಅನುಮತಿ ನೀಡಲಾಗಿದೆ. ಹೀಗಾಗಿ ಒಂದೇ ದಿನ 6 ಸಾವಿರ ಮಂದಿಗೆ ಸಮ್ಮತಿಸಲಾಗಿದೆ. ಅರಮನೆ ಮೈದಾನದ ಬಳಿ ಸುಮಾರು 6 ಸಾವಿರ ಮಂದಿ ಜಮಾಯಿಸಿದ್ದಾರೆ.ಯಾವುದೇ ಸೋಷಿಯಲ್ ಡಿಸ್ಟೆನ್ಸ್ ಇಲ್ಲ, ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾರ್ಮಿಕರು ಜಮಾವಣೆಗೊಂಡಿದ್ದಾರೆ. ಇಂದು ಎರಡು ರೈಲುಗಳು ಒರಿಸ್ಸಾ ಮತ್ತು ಮಣಿಪುರಕ್ಕೆ ಹೊರಡಲಿವೆ. ಚಿಕ್ಕಬಾಣವಾರದಿಂದ ಮಧ್ಯಾಹ್ನದ ನಂತರ ಹೊರಡಲಿವೆ. 2,800 ಜನಕ್ಕಷ್ಟೇ ,ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಆದರೆ ಮೇಖ್ರಿ ಸರ್ಕಲ್ ನಿಂದ ಕಾವೇರಿ ಥಿಯೇಟರ್ ವರೆಗೂ ಜನಸಾಗರವೇ ನೆರೆದಿದ್ದು, ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.ಪ್ಯಾಲೇಸ್ ಗ್ರೌಂಡ್ ಬಳಿ ಹೊರ ರಾಜ್ಯದ ನಿವಾಸಿಗಳ ದಂಡು ನೆರೆದಿದ್ದು, ಸುಮಾರು ಮೂರು ಕಿಲೋಮೀಟರ್ ನಷ್ಟು ಜನ ಕ್ಯೂ ನಿಂತಿದ್ದಾರೆ. ಸ್ಥಳಕ್ಕೆ ವೈದ್ಯಕೀಯ ಶಿಕ್ಷಣ ಸಚಿವ, ಡಿಸಿಪಿ ರೋಹಿಣಿ ಕಟೋಚ್ ಹಾಗೂ ಚೇತನ್ ಸಿಂಗ್ ರಾಥೋಡ್ ಭೇಟಿ ನೀಡಿದ್ದಾರೆ.Sign in to your account
Username or Email Address


Password

 Remember Me


