ಬೆಂಗಳೂರು: ತಡರಾತ್ರಿ ಇಂಡೋನೇಷ್ಯಾದ ಜಕಾರ್ತದಿಂದ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 50 ಮಂದಿ ತಮಗೆ ಹೋಟೆಲ್ ಕ್ವಾರಂಟೈನ್ ಬೇಡ ಅಂತ ಕಿರಿಕ್ ನಡೆಸಿರುವ ಘಟನೆ ನಡೆದಿದೆ.ತಡರಾತ್ರಿ 1.40ಕ್ಕೆ ಎಐ-1311 ವಿಮಾನದಲ್ಲಿ 214 ಮಂದಿ ಆಗಮಿಸಿದ್ದಾರೆ. ಇವರಲ್ಲಿ ಬಹುತೇಕರು ಆರೋಗ್ಯ ತಪಾಸಣೆ ನಂತರ ಹೋಟೆಲ್ ಕ್ವಾರಂಟೈನ್‍ಗೆ ಒಳಗಾಗಿದ್ದರು. ಆದರೆ ಇವರಲ್ಲಿ 50 ಮಂದಿ ಮಾತ್ರ ನಮ್ಮ ಬಳಿ ದುಡ್ಡಿಲ್ಲ ಹೋಟೆಲ್ ಕ್ವಾರಂಟೈನ್ ಮಾಡಬೇಡಿ. ನಮ್ಮನ್ನು ಮನೆಗೆ ಕಳುಹಿಸಿ ಅಂತ ಪಟ್ಟುಹಿಡಿದಿದ್ದಾರೆ.ಕೊನೆಗೆ ಇಡೀ ರಾತ್ರಿ ವಿಮಾನ ನಿಲ್ದಾಣದಲ್ಲೇ ಹಠ ಹಿಡಿದು ಕುಳಿತಿದ್ದ 50 ಮಂದಿಯನ್ನು ಅಧಿಕಾರಿಗಳು ಮನವೊಲಿಸಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರಿನ ಹಜ್ ಭವನದಲ್ಲಿ ಕ್ವಾರಂಟೈನ್ ಮಾಡಲು ಶಿಫ್ಟ್ ಮಾಡಿದ್ದಾರೆ.Sign in to your account
Username or Email Address


Password

 Remember Me


