ಧಾರವಾಡ: ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆಗೆ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾದರಿಯಂತೆ. ಹೀಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.ಹೌದು, ಧಾರವಾಡದ ಕಾಂಗ್ರೆಸ್ ಮುಖಂಡ ಚಿಂಚೋರೆಗೆ ಬಾಲಚಂದ್ರ ಜಾರಕಿಹೊಳಿ ಮಾದರಿಯಂತೆ. ಲಾಕ್‍ಡೌನ್ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೋಳಿ ಅವರು ಕೆಎಂಎಫ್‍ನಿಂದ ಉಚಿತ ಹಾಲನ್ನು ಕೊಟ್ಟಿದ್ದರು. ಇದನ್ನು ನೋಡಿದ ದೀಪಕ್ ಚೊಂಚೋರೆ ಕೂಡ ಬಡ ಜನರಿಗೆ ದಿನಸಿ ಕಿಟ್ ಕೊಟ್ಟಿದ್ದಾರೆ.ಸದ್ಯ ಲಾಕ್‍ಡೌನ್ ಆರಂಭವಾದಾಗಿನಿಂದ ಈ ಕಾಂಗ್ರೆಸ್ ಮುಖಂಡ 20 ಸಾವಿರ ದಿನಸಿ ಕಿಟ್‍ನ್ನು ಕೊಟ್ಟಿದ್ದಾರೆ. ರಂಜಾನ್ ಹಬ್ಬ ಇರುವ ಕಾರಣ, ಶಾವಿಗೆ ಕೂಡ ಕಿಟ್‍ನಲ್ಲಿ ಹಾಕಿ ಕೊಡುತಿದ್ದಾರೆ. ಬಾಲಚಂದ್ರ ಜಾರಕಿಹೊಳಿ ನನ್ನ ಗೆಳೆಯ, ಅವರು ಮಾಡಿದಂತೆಯೇ ನಾನು ಕೂಡ ಬಡವರಿಗೆ ಸಹಾಯ ಮಾಡುತ್ತಿದ್ದೇನೆ ಎಂದು ದೀಪಕ್ ಚಿಂಚೋರೆ ಹೇಳಿದ್ದಾರೆ.Sign in to your account
Username or Email Address


Password

 Remember Me


