ಹಾಸನ: ಹಾಸನ ಜಿಲ್ಲೆಯಲ್ಲಿ ಇಂದು ಹೊಸದಾಗಿ 18 ಕೋವಿಡ್-19 ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 85ಕ್ಕೆ ಏರಿಕೆಯಾಗಿದೆ.ಇಂದು ವರದಿಯಾದ ಎಲ್ಲಾ ಪ್ರಕರಣಕ್ಕೆ ಮುಂಬೈ ಮೂಲದ ನಂಟಿದೆ. ಎಲ್ಲರೂ ಚನ್ನರಾಯಪಟ್ಟಣ ತಾಲೂಕಿಗೆ ಸೇರಿದವಾರಗಿದ್ದು, ಮುಂಬೈನಿಂದ ಆಗಮಿಸಿ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದವರಾಗಿದ್ದಾರೆ. ಈ ಮೂಲಕ ಚನ್ನರಾಯಪಟ್ಟಣದಲ್ಲಿ 60, ಆಲೂರಿನಲ್ಲಿ 3, ಅರಕಲಗೂಡಿನಲ್ಲಿ 2, ಅರಸಿಕೇರೆಯಲ್ಲಿ 1, ಬೇಲೂರಿನಲ್ಲಿ 0, ಹಾಸನದಲ್ಲಿ 3, ಹೋಳೆನರಸಿಪುರದಲ್ಲಿ 16 ಮತ್ತು ಸಕಲೇಶಪುರದಲ್ಲಿ 0 ಪ್ರಕರಣಗಳು ದಾಖಲಾಗಿವೆ.ಜಿಲ್ಲೆಗೆ ಮಹಾರಾಷ್ಟ್ರದಿಂದ ಆಗಮಿಸಿದವರಿಂದ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಇನ್ನೂ 500 ಮಂದಿಯ ಟೆಸ್ಟಿಂಗ್‍ಗಳ ವರದಿ ಬಾಕಿಯಿದೆ. ಮುಂದಿನ ದಿನಗಳಲ್ಲಿ ಹಾಸನದಲ್ಲಿ ಮತ್ತಷ್ಟು ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗುವ ಸಾಧ್ಯತೆಯಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.ಹಾಸನ ಜಿಲ್ಲೆಯಲ್ಲಿ 85ಕ್ಕೇರಿದ ಕೊರೊನಾ ಸೋಂಕಿತರು – ಇಂದು 18 ಪ್ರಕರಣಗಳು ದೃಢSign in to your account
Username or Email Address


Password

 Remember Me


