ಮಡಿಕೇರಿ: ಮನೆಯವರಿಗೆ ಪ್ರಾಣ ಬೆದರಿಕೆಯೊಡ್ಡಿ ಮನೆ ದರೋಡೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ನಡೆದಿದೆ.ವಿರಾಜಪೇಟೆ ಹಾಗೂ ಗೋಣಿಕೊಪ್ಪ ರಸ್ತೆಯಲ್ಲಿರುವ ಶಬ್ಬೀರ್ ಅಹ್ಮದ್ ಎಂಬವರ ಮನೆಯಲ್ಲಿ ದರೋಡೆ ನಡೆದಿದೆ. ಕರಿಮೆಣಸು ಉದ್ಯಮಿ ಅಗಿರುವ ಶಬೀರ್ ಅಹ್ಮದ್ ಅವರ ಮನೆಗೆ ತಡರಾತ್ರಿ 2.30ರ ವೇಳೆಗೆ ಮನೆಗೆ ನುಗ್ಗಿದ್ದಾರೆ. ದರೋಡೆಕೋರರು ಅಡುಗೆ ಮನೆಯ ಕಿಟಕಿಯ ಸರಳನ್ನು ಕತ್ತರಿಸಿ ಒಳ ನುಗ್ಗಿದ್ದಾರೆ.ಮನೆಯಲ್ಲಿದ್ದ ಮೂವರಿಗೆ ಗದ್ದಲ ಮಾಡದಂತೆ ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ. ಅಲ್ಲದೆ ಅವರ ಬಾಯಿಗೆ ಪ್ಲಾಸ್ಟರ್ ಹಾಕಿ ಚಾಕು ತೋರಿಸಿ ಹೆದರಿಸಿ ಬೆದರಿಸಿದ್ದಾರೆ. ಮನೆ ಮಾಲೀಕ ಪ್ರಾಣ ಉಳಿಸಿ, ಬೇಕಾದ್ದನ್ನು ತೆಗೆದುಕೊಂಡು ಹೋಗುವಂತೆ ಅಂಗಲಾಚಿದ್ದಾರೆ. ಪ್ಲಾಸ್ಟರ್ ಹಾಕುವಾಗ ಚಿಕ್ಕ ಪುಟ್ಟ ಗಾಯಗಾಳಾಗಿದ್ದ ಮನೆಯಲ್ಲಿ ಇದ್ದ ಮೂವರನ್ನು ವಿರಾಜಪೇಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ.ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


