ರಾಯಚೂರು: ತಾಲೂಕಿನ ಸರ್ಜಾಪುರ ಗ್ರಾಮದ ಇಬ್ಬರು ಯುವಕರು ಮೊಲ ಬೇಟೆಯಾಗಿ ಟಿಕ್‍ಟಾಕ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದರಿಂದ ಇಬ್ಬರನ್ನು ಬಂಧಿಸಲಾಗಿದೆ.ಮೇ 19ರಂದು ಮೊಲ ಬೇಟೆಯಾಡಿ, ಮೊಲದ ಚರ್ಮ ಸುಳಿದು ಟಿಕ್‍ಟಾಕ್ ಮಾಡಿದ್ದಾರೆ. ಸರ್ಜಾಪುರದ ಪವನ ನಾಯಕ್ ಹಾಗೂ ಸ್ವಾಮಿ ನಾಯಕ್ ಬಂಧಿತ ಆರೋಪಿಗಳು. ಮೊಲ ಬೇಟೆಯಾಡಿ, ಅದನ್ನು ಕೈಯಲ್ಲಿಡಿದ ವಿಡಿಯೋವನ್ನು ಅವರು ಟಿಕ್‍ಟಾಕ್‍ಗೆ ಅಪ್ಲೋಡ್ ಮಾಡಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದಂತೆ ಎಚ್ಚೆತ್ತ ಅರಣ್ಯ ಇಲಾಖೆಯ ಸಿಬ್ಬಂದಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಾವೇ ಮೊಲಗಳನ್ನು ಬೇಟೆಯಾಡಿರುವುದಾಗಿ ಯುವಕರು ಬಾಯಿ ಬಿಟ್ಟಿದ್ದಾರೆ. ವಿಚಾರಣೆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.Sign in to your account
Username or Email Address


Password

 Remember Me


