ಮಂಗಳೂರು: ಮಹಾಮಾರಿ ಕೊರೊನಾ ವೈರಸ್ ಜನರನ್ನು ಯಾವ ರೀತಿಯಲ್ಲೆಲ್ಲ ಆಟ ಆಡಿಸುತ್ತಿದೆ ಎಂಬುದು ದಿನ ನಿತ್ಯ ನೋಡುತ್ತಾ ಇರುತ್ತೀವಿ. ವಿಧಿಯಾಟದ ಮುಂದೆ ಯಾವ ಆಟ ನಡೆಯಲ್ಲಿ ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.ಹೌದು. ಅತ್ತ ಪತಿ ಕೊರೊನಾಗೆ ಬಲಿಯಾದರೆ ಇತ್ತ ಪತ್ನಿ ಮಗುವಿಗೆ ಜನ್ಮವಿತ್ತಿದ್ದಾರೆ. ಹೀಗಾಗಿ ಒಂದು ಕಡೆ ಖುಷಿ ವಿಚಾರವಿದ್ದರೆ, ಇನ್ನೊಂದೆಡೆ ಕೊನೆಯ ಬಾರಿ ಪತಿ ಮುಖವನ್ನೂ ನೋಡಲಾಗದೆ ಪತ್ನಿ ಕಂಗಾಲಾಗಿದ್ದಾರೆ.ಮೂಡಬಿದಿರೆಯ ಜೈನ್ ಪೇಟೆ ನಿವಾಸಿ ಮುಂಬೈನಲ್ಲಿ ಉದ್ಯೋಗದಲ್ಲಿದ್ದು ಕೊರೊನಾದಿಂದ ಬಳಲುತ್ತಿದ್ದರು. ಆದರೆ ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಇತ್ತ ಅದೇ ದಿನ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಮಗು ಹುಟ್ಟುವ ದಿನವೇ ಪತಿ ಕೊರೊನಾಗೆ ಬಲಿಯಾಗಿರುವುದು ದುರ್ದೈವದ ಸಂಗತಿಯಾಗಿದೆ.ಒಟ್ಟಿನಲ್ಲಿ ಪತ್ನಿ ಹಾಗೂ ಮೃತರ ಕುಟುಂಬಕ್ಕೆ ಒಂದು ಕಡೆ ಮಗು ಹುಟ್ಟಿದ ಖುಷಿಯಾದರೆ ಇನ್ನೊಂದೆಡೆ ಕುಟುಂಬದ ಸದಸ್ಯ ಇನ್ನಿಲ್ಲ ಅನ್ನೋ ದುಃಖ ಕಾಡುತ್ತಿದೆ. ಇಂತಹ ಹಲವು ಘಟನೆಗಳ ಮೂಲಕ ಕೊರೊನಾ ಹೆಮ್ಮಾರಿ ಜನರನ್ನು ಸಂದಿಗ್ಧ ಪರಿಸ್ಥಿಯಲ್ಲಿ ತಂದಿಟ್ಟಿದೆ.Sign in to your account
Username or Email Address


Password

 Remember Me


