ಬೆಂಗಳೂರು: ಇಬ್ಬರು ಕಬ್ಬಿಣ ಕಳ್ಳರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದ್ದರಿಂದ ಪೊಲೀಸ್ ಇಲಾಖೆ ಹಾಗೂ ಹೆಬ್ಬಗೋಡಿ ಠಾಣೆಯ ಸಿಬ್ಬಂದಿಗೆ ಆತಂಕ ಶುರುವಾಗಿತ್ತು. ಆದರೆ ಕ್ವಾರಂಟೈನ್‍ನಲ್ಲಿದ್ದ 30 ಜನ ಪೊಲೀಸರ ಕೋವಿಡ್-19 ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ.ಮೂವರು ಆರೋಪಿಗಳು ಮೇ 17ರಂದು ಕಬ್ಬಿಣ ಕಳ್ಳತನ ಮಾಡುವಾಗ ರೆಡ್‍ಹ್ಯಾಂಡ್ ಆಗಿ ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸರ ಕೈಗೆ ಸಿಕ್ಕಿನಿದ್ದಿದ್ದರು. ಅಷ್ಟೇ ಅಲ್ಲದೆ ಸ್ಥಳೀಯರು ಆರೋಪಿಗಳನ್ನು ತಳಿಸಿದ್ದರು. ಈ ಪೈಕಿ ಪಾದರಾಯನಪುರ ನಿವಾಸಿಯಾಗಿದ್ದ ಕಳ್ಳ (ರೋಗಿ-1396)ಗೆ ಸೋಂಕು ತಗುಲಿರುವುದು ಮೇ 19ರಂದು ದೃಢಪಟ್ಟಿತ್ತು. ಇದರಿಂದಾಗಿ ಉಳಿದ ಇಬ್ಬರು ಕಳ್ಳರನ್ನು ಪರೀಕ್ಷೆಗೆ ಒಳಪಡಿಸಿದಾಗ ಒಬ್ಬನ ರಿಪೋರ್ಟ್ ಪಾಸಿಟಿವ್ ಬಂದರೆ, ಇನ್ನೋರ್ವ ಆರೋಪಿಯ ವರದಿಯು ನೆಗೆಟಿವ್ ಬಂದಿತ್ತು.ಬುಧವಾರ ಸೋಂಕು ಪತ್ತೆಯಾದ ಕಳ್ಳ ರೋಗಿ-1397 ಆಗಿದ್ದು, ಆತನನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಸೋಂಕಿತರ ಜೊತೆಗೆ ಸಂಪರ್ಕ ಹೊಂದಿದ್ದ ಹೆಬ್ಬಗೋಡಿ ಠಾಣೆಯ ಇನ್ಸ್‍ಪೆಕ್ಟರ್ ಬಿ.ಕೆ.ಶೇಖರ್, ಎಸ್‍ಐ ಶಂಕರ್ ಸೇರಿದಂತೆ 30 ಜನ ಪೊಲೀಸರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಬಳಿಕ ಅವರ ಗಂಟಲು ದ್ರವವನ್ನು ಟೆಸ್ಟ್‍ಗೆ ಕಳುಹಿಸಲಾಗಿತ್ತು. ಇಂದು ಅವರ ರಿಪೋರ್ಟ್ ನೆಗೆಟಿವ್ ಬಂದಿದೆ. ಇದರಿಂದಾಗಿಮತ್ತೊಬ್ಬ ಕಳ್ಳನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಹೆಬ್ಬಗೋಡಿ ಪೊಲೀಸರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಹೆಬ್ಬಗೋಡಿ ಠಾಣೆಗೆ ದಿನಕ್ಕೆ ಮೂರು ಬಾರಿ ಸ್ಯಾನಿಟೈರ್ ಸಿಂಪಡಣೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ಹಾಗೂ ಹೆಬ್ಬಗೋಡಿ ಠಾಣೆಯ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.Sign in to your account
Username or Email Address


Password

 Remember Me


